ಟ್ಯಾಕ್ಸಿ ಚಾಲಕರು ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸಲು ಕ್ಯಾಬ್ ದೋಸ್ತ್ ನಿಂದ ಅಭಿಯಾನ

 

ಬೆಂಗಳೂರು,ಮಾ.23- ಟ್ಯಾಕ್ಸಿ ಚಾಲಕರು ನಿಗದಿತ ಅವಧಿಯೊಳಗೆ ತೆರಿಗೆ ಪಾವತಿ ಮಾಡುವ ಸಂಬಂಧ ಕ್ಯಾಬ್ ದೋಸ್ತ್ ಎಂಬ ಸಾಮಾಜಿಕ ಸಂಸ್ಥೆಯು ಉಚಿತ ಆದಾಯ ತೆರಿಗೆ ಸಲ್ಲಿಕೆ ಅಭಿಯಾನ ಆರಂಭಿಸಿದೆ.

ಈಗಾಗಲೇ ಕಳೆದ ಮಾ.20ರಿಂದ ನಗರದ ವಿವಿಧ ಕಡೆ ಅಭಿಯಾನ ಆರಂಭವಾಗಿದ್ದು , 26ರವರೆಗೂ ನಡೆಯಲಿದೆ. ನಾಳೆ ಬೆಳಗ್ಗೆ 10.30ರಿಂದ ಸಂಜೆ 6 ಗಂಟೆವರೆಗೆ ಎರಡು ದಿನಗಳ ಕಾಲ ಮಲ್ಲೇಶ್ವರಂ ಮೈದಾನದಲ್ಲಿ ಅಭಿಯಾನ ನಡೆಯಲಿದೆ.

ಟ್ಯಾಕ್ಸಿ ಚಾಲಕರು ಇದರ ಸದುಪಯೋಗಪಡಿಸಿಕೊಂಡು ನಿಗದಿತ ಅವಧಿಯೊಳಗೆ ತೆರಿಗೆ ಪಾವತಿ ಮಾಡುವಂತೆ ಕ್ಯಾಬ್ ದೋಸ್ತ್ ಮನವಿ ಮಾಡಿದರು.

ಅಭಿಯಾನಕ್ಕೆ ಬರುವ ಟ್ಯಾಕ್ಸಿ ಚಾಲಕರು ಪಾನ್‍ಕಾರ್ಡ್, ಆಧಾರ್, ಗುರುತಿನ ಚೀಟಿ, ಬ್ಯಾಂಕ್ ಸ್ಟೇಟ್‍ಮೆಂಟ್ ಅಕೌಂಟ್ ಸೇರಿದಂತೆ ಮೂಲ ದಾಖಲೆಗಳನ್ನು ತರಬೇಕು. ತೆರಿಗೆ ಪಾವತಿ ಮಾಡುವುದರಿಂದ ಉಂಟಾಗುವ ಅನುಕೂಲಗಳು ಹಾಗೂ ಅನಾನುಕೂಲಗಳು ಸೇರಿದಂತೆ ಸಾಧಕ-ಬಾಧಕಗಳ ಬಗ್ಗೆ ಆದಾಯ ಇಲಾಖೆಯ ನುರಿತ ತಜ್ಞರು ಸಲಹೆ ನೀಡಲಿದ್ದಾರೆ.

ಈಗಾಗಲೇ ಮಾ.21ರಂದು ಆರಂಭವಾಗಿರುವ ಅಭಿಯಾನಕ್ಕೆ 150ಕ್ಕೂ ಹೆಚ್ಚು ಚಾಲಕರು ನೋಂದಣಿ ಮಾಡಿಕೊಂಡರೆ ನಮ್ಮ ಸಂಸ್ಥೆಯು ರೋಡಿಯೋ ಸಿಟಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವೋಲ್ವೊ ಮತ್ತು ಉಭಯ ಸಂಸ್ಥೆಗಳ ಸಹಯೋಗದಲ್ಲಿ ಈ ಅಭಿಯಾನವನ್ನು ಆರಂಭಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟ್ಯಾಕ್ಸಿ ಪಾರ್ಕ್‍ನಲ್ಲಿ ಆರಂಭಿಸಿರುವ ಈ ಅಭಿಯಾನಕ್ಕೆಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಎಂದು ಕ್ಯಾಬ್ ದೋಸ್ತ್ ಸಂಸ್ಥೆ ಸಂಸ್ಥಾಪಕರಾದ ಯಮುನ ಶಾಸ್ತ್ರಿ ತಿಳಿಸಿದ್ದಾರೆ.

2015ರಲ್ಲಿ ನಾವು ಟ್ಯಾಕ್ಸಿ ಚಾಲಕರ ಆದಾಯ ತೆರಿಗೆ ರಿಟನ್ರ್ಸ್‍ಗಳನ್ನು ಉಚಿತವಾಗಿ ಸಲ್ಲಿಸುವ ಸಾಕ್ಷಾರತ ಅಭಿಯಾನವನ್ನು ಆರಂಭಿಸಿದೆವು. ಇದರ ಪರಿಣಾಮ ಈವರೆಗೆ 5,500 ರಿಟನ್ರ್ಸ್‍ಗಳನ್ನು ಸಲ್ಲಿಸಿ ಒಂದು ಕೋಟಿಗೂ ಅಧಿಕ ಹೆಚ್ಚಿನ ಹಣ ವಾಪಸ್ ಬರುವಂತೆ ಮಾಡಿರುವ ಹೆಮ್ಮೆ ನಮಗಿದೆ ಎನ್ನುತ್ತಾರೆ.

ಸಾಮಾನ್ಯವಾಗಿ ಟ್ಯಾಕ್ಸಿ ಚಾಲಕರು ಆದಾಯ ತೆರಿಗೆ ವ್ಯಾಪ್ತಿಯೊಳಗೆ ಬರುತ್ತಾರೆ. ಆದರೆ ಅವರಿಗೆ ಯಾವ ಸಂದರ್ಭದಲ್ಲಿ ಹೇಗೆ ಆದಾಯ ತೆರಿಗೆ ಪಾವತಿಸಬೇಕೆಂಬ ಮಾಹಿತಿ ಇರುವುದಿಲ್ಲ. ತೆರಿಗೆಗೆ ಸಂಬಂಧಪಟ್ಟ ಅರ್ಜಿಗಳನ್ನು ಸಲ್ಲಿಸಿದ ಕಾರಣ ಆದಾಯ ದಾಖಲೆಯನ್ನು ಸಿದ್ದಪಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.

ತೆರಿಗೆ ಕಟ್ಟಿದರೂ ಅವರಿಗೆ ಕಾನೂನು ಬದ್ಧವಾಗಿ ಸಿಗಬೇಕಾದ ಟಿಡಿಎಸ್ ಹಣ ಸಿಗುತ್ತಿಲ್ಲ. ಹೀಗಾಗಿ ನಾನು ಈ ಅಭಿಯಾನವನ್ನು ಆರಂಭಿಸಿದ್ದೇವೆ. ನಾಳೆ ನಡೆಯಲಿರುವ ಅಭಿಯಾನಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಹೆಚ್ಚಿನ ಮಾಹಿತಿಗಾಗಿ ಮೊ: 9590906906 ಹಾಗೂ 9739885822

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ