ಬೆಳಗಾವಿ, ಮಾ.23-ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನವೇ ನಿಯಮ ಉಲ್ಲಂಘಿಸಿ ಪರೀಕ್ಷಾ ಮಂಡಳಿ ಎಡವಟ್ಟು ಮಾಡಿದೆ.
ಪ್ರಶ್ನೆ ಪತ್ರಿಕೆಗಳನ್ನು ಸಾಗಣೆ ಮಾಡುವ ವಾಹನದಲ್ಲಿ ಇಂದು ಪರೀಕ್ಷೆ ಬರೆಯಲಿದ್ದ ವಿದ್ಯಾರ್ಥಿಗಳನ್ನು ಕರೆದೊಯ್ದು ನಿಯಮ ಉಲ್ಲಂಘಿಸಲಾಗಿದೆ.
ಅಥಣಿ ತಾಲ್ಲೂಕಿನ ಶೇಗುಣಸಿ ಗ್ರಾಮದ ಶಾಲೆಯೊಂದಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನವಾದ ಇಂದು ಪ್ರಶ್ನೆಪತ್ರಿಕೆಗಳನ್ನು ವಾಹನದಲ್ಲಿ ರವಾನಿಸುವಾಗ ದಾರಿಮಧ್ಯೆ ವಿದ್ಯಾರ್ಥಿಗಳಿಗೆ ನೆರವಾಗಲು ಅದೇ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಹಳೇ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲೇ ಈ ಘಟನೆ ಸಂಭವಿಸಿದ್ದು, ಈ ಸಂಬಂಧ ಸ್ಥಳೀಯರಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.