ಛತ್ತೀಸ್‍ಗಢದಲ್ಲಿ ನಕಲ್ಸರ ದಾಳಿಗಳು ಮುಂದುವರಿದಿವೆ:

ರಾಯ್‍ಪುರ್, ಮಾ.23-ಛತ್ತೀಸ್‍ಗಢದಲ್ಲಿ ನಕಲ್ಸರ ದಾಳಿಗಳು ಮುಂದುವರಿದಿವೆ. ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಹುದುಗಿಸಿಟ್ಟಿದ್ದ ಪ್ರೆಷರ್ ಬಾಂಬ್(ಸುಧಾರಿತ ನೆಲಬಾಂಬ್) ಸ್ಫೋಟಗೊಂಡು ಸಬ್-ಇನ್ಸ್‍ಪೆಕ್ಟರ್ ಸೇರಿದಂತೆ ಕೆಲವು ಪೆÇಲೀಸರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.
ಭೋಪಾಲ್‍ಪಟ್ಟಣಂ ಪೆÇಲೀಸ್ ಠಾಣೆಯಿಂದ 4 ಕಿ.ಮೀ.ದೂರದ ಉಲ್ಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಪ್ರದೇಶದಲ್ಲಿ ನಕ್ಸಲ್ ಬೇಟೆ ಕಾರ್ಯಾಚರಣೆಯಲ್ಲಿ ಪೆÇಲೀಸರು ತೊಡಗಿದ್ದಾಗೆ ಪ್ರೆಷರ್ ಬಾಂಬ್ ಸ್ಫೋಟಗೊಂಡಿತು ಎಂದು ಉಪ ಪೆÇಲೀಸ್ ಮಹಾ ನಿರೀಕ್ಷಕ ಪಿ.ಸುಂದರ್‍ರಾಜ್ ತಿಳಿಸಿದ್ದಾರೆ.
ಮಾರ್ಚ್ 13ರಂದು ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯ ಅರಣ್ಯದಲ್ಲಿ ಬಾಂಬ್ ಸ್ಫೋಟದಿಂದ ಒಂಭತ್ತು ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ