
ಬೆಂಗಳೂರು,ಮಾ.23-ಕಾಂಗ್ರೆಸ್ನ ಇಬ್ಬರು ನಾಯಕರು ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿದ್ದು , ಏಜೆಂಟರ ಗಮನಕ್ಕೆ ಬಂದು ಎರಡು ಬಾರಿ ಮತ ಪತ್ರ ಪಡೆದು ಮತ ಚಲಾಯಿಸಿರುವುದಕ್ಕೆ ನಾವು ಪ್ರತಿಭಟಿಸಿ ದೂರು ನೀಡಿದ್ದೇವೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಚುನಾವಣಾಧಿಕಾರಿಗಳಿಗೂ ದೂರು ನೀಡಿದ್ದೇವೆ. ವೀಕ್ಷಕರಾದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ತಪ್ಪು ಎಂದೇ ಹೇಳಿದ್ದಾರೆ ಎಂದು ತಿಳಿಸಿದರು.
ಸುಮಾರು20 ಶಾಸಕರು ಅಡ್ಡ ಮತದಾನ ಮಾಡುವವರಿದ್ದರು ಆದರೆ ಕಾಂಗ್ರೆಸ್ ಬೆದರಿಕೆವೊಡ್ಡಿದೆ ಎಂದು ಆರೋಪಿಸಿದರು.