ಎಸ್‍ಎಸ್‍ಎಲ್‍ಸಿ ಪರೀಕ್ಷಾ ಭೀತಿಯಿಂದ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಪರಾರಿ

ಬೆಂಗಳೂರು, ಮಾ.23- ಎಸ್‍ಎಸ್‍ಎಲ್‍ಸಿ ಪರೀಕ್ಷಾ ಭೀತಿಯಿಂದ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಪರಾರಿಯಾಗಿರುವ ಘಟನೆ ಸುಂಕದಕಟ್ಟೆಯಲ್ಲಿ ನಡೆದಿದೆ.

ಮಹದೇಶ್ವರ ನಗರದ 6ನೆ ಅಡ್ಡರಸ್ತೆಯಲ್ಲಿರುವ ಬಿ.ಕೃಷ್ಣಮೂರ್ತಿ ಎಂಬುವವರ ಪುತ್ರ ಮಹೇಶ್ (16) ನಾಪತ್ತೆಯಾಗಿರುವ ವಿದ್ಯಾರ್ಥಿ.

ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಾದ ಮಹೇಶ್ ಕಳೆದ ಬುಧವಾರದಿಂದ ಕಾಣೆಯಾಗಿದ್ದಾನೆ.

ಕನ್ನಡ ಮತ್ತು ಇಂಗ್ಲಿಷ್ ಮಾತನಾಡುವ ಈತನ ಬಗ್ಗೆ ಸುಳಿವು ದೊರೆತರೆ ಮೊಬೈಲ್ ಸಂಖ್ಯೆ 9945246714/9880885345/ 9900330724 ಹಾಗೂ 9740866871 ಸಂಪರ್ಕಿಸಲು ಕೋರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ