ಸುಮಾರು 70 ವರ್ಷ ವಯಸ್ಸಿನವರಾಗಿದ್ದ ಮುನಿಯಪ್ಪ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.
೧೯೮೯ ರಲ್ಲಿ ಕಾಟನ್ಪೇಟೆ ವಾರ್ಡ್ನಿಂದ ಬೆಂಗಳೂರು ಮಹಾನಗರ ಪಾಲಿಕೆಗೆ ಆಯ್ಕೆಯಾಗಿದ್ದ ಮುನಿಯಪ್ಪ,೧೯೯೪ ರಲ್ಲಿ ಗಾಂಧಿನಗರ ಕ್ಷೇತ್ರದಿಂದ ಎಐಎಡಿಎಂಕೆ ಶಾಸಕರಾಗಿ ಆಯ್ಕೆಯಾಗಿದ್ದರು. ಎರಡು ವರ್ಷಗಳ ಹಿಂದೆ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಎಐಡಿಎಂಕೆ ಪಕ್ಷದಿಂದ ಬೆಂಗಳೂರು ಗಾಂಧಿನಗರ ಕ್ಷೇತ್ರದಿಂದ ಆಯ್ಕೆಯಾಗಿ ಜನಪ್ರಿಯ ಶಾಸಕರಾಗಿದ್ದ
ಶ್ರೀ ಬಿ.ಮುನಿಯಪ್ಪನವರು ಇಂದು (23.3.2018) ಮಧ್ಯಾನ್ಹ : 3.00 ಘಂಟೆಗೆ ವಿಧಿವಶರಾದರು.
ಶ್ರೀ ಬಿ.ಮುನಿಯಪ್ಪನವರು ಮೌಲ್ಯಾಧಾರಿತ ಹಾಗು ಸಜ್ಜನ ರಾಜಕಾರಣಿಯಾಗಿದ್ದವರು.
ಅವರ ಅಗಲಿಕೆಯಿಂದ ಒಬ್ಬ ಉತ್ತಮ ಸ್ನೇಹಿತರನ್ನು ಕಳೆದುಕೊಂಡಂತಾಗಿದೆ.
ನಾಳೆ 24.3.2018 ಮಧ್ಯಾನ್ಹ 12.00 ರವರೆಗೆ ಅವರ ಸ್ವಗೃಹದಲ್ಲಿ ಅಂತಿಮ ದರ್ಶನ ಹಾಗು
3.00 ಕ್ಕೆ ಶ್ರೀರಾಮಪುರ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.
ವಂದನೆಗಳೊಡನೆ,
ರಾಮಚಂದ್ರ ಗೌಡ
ವಿಧಾನ ಪರಿಷತ್ ಸದಸ್ಯ.
ಹೆಚ್ಚಿನ ಮಾಹಿತಿಗೆ : ಶ್ರೀ ಭರತ್ ಮುನಿಯಪ್ಪ 8150877333