ಮೈಸೂರು, ಮಾ.22- ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಪೂರ್ಣ ಸ್ವಾಯತ್ತತೆ ಸ್ಥಾನಮಾನ ನೀಡಿದೆ.
ಈ ಬಗ್ಗೆ ಮೈಸೂರು ವಿವಿ ಹಂಗಾಮಿ ಕುಲಪತಿ ಪೆÇ್ರ.ಸಿ.ಬಸವರಾಜು ಮಾತನಾಡಿ, ದೇಶದ 780 ವಿಶ್ವವಿದ್ಯಾನಿಲಯಗಳ ಪೈಕಿ 19 ವಿವಿಗಳಿಗೆ ಸಂಪೂರ್ಣ ಸ್ವಾಯತ್ತತೆಯನ್ನು ಯುಜಿಸಿ ನೀಡಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮೈಸೂರು ವಿವಿಗೆ ಮಾತ್ರ ಈ ಸ್ಥಾನಮಾನ ದೊರೆತಿರುವುದರಿಂದ ಸಂತಸ ಉಂಟಾಗಿದೆ ಎಂದು ತಿಳಿಸಿದರು