![Protest](http://kannada.vartamitra.com/wp-content/uploads/2018/03/Protest-635x381.jpg)
ಬೆಂಗಳೂರು, ಮಾ.22- ಖಾಯಂಮಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿತು.
ಫೆಡರೇಷನ್ ಅಧ್ಯಕ್ಷ ಸತ್ಯಬಾಬು ಮತ್ತು ಪ್ರಧಾನ ಕಾರ್ಯದರ್ಶಿ ಎಸ್.ಎಂ. ಶಿವಕುಮಾರ್ ನೇತೃತ್ವದಲ್ಲಿಂದು ಸಿಟಿ ರೈಲ್ವೆ ಸ್ಟೇಷನ್ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಶಿವಕುಮಾರ್ ಮಾತನಾಡಿ, ಇಂಧನ ಇಲಾಖೆಯಲ್ಲಿ ಸುಮಾರು 30 ಸಾವಿರ ಕಾರ್ಮಿಕರು ಹೊರ ಗುತ್ತಿಗೆಯಲ್ಲಿ ದುಡಿಯುತ್ತಿದ್ದಾರೆ. ನಾಲ್ಕೂವರೆ ಸಾವಿರದಿಂದ 10 ಸಾವಿರ ವೇತನ ಪಡೆಯುತ್ತಾರೆ. ಇಎಸ್ಐ, ಪಿಎಫ್ ಇದ್ದರೂ ಖಾಯಂ ಮಾಡಿಲ್ಲ.
ಪ್ರತಿ ವರ್ಷ 60ಕ್ಕೂ ಹೆಚ್ಚು ಕಾರ್ಮಿಕರು ವಿವಿಧ ಕಾಯಿಲೆಯಿಂದ ಸಾವನ್ನಪ್ಪುತ್ತಾರೆ. ಆದರೆ ಇಂಧನ ಇಲಾಖೆ ಪರಿಹಾರ ನೀಡುತ್ತಿಲ್ಲ ಎಂದು ದೂರಿದರು.
ಇಂಧನ ಸಚಿವರು ಗುತ್ತಿಗೆ ಕಾರ್ಮಿಕರ ಸಭೆ ಕರೆದು ಚರ್ಚೆ ನಡೆಸಿದರು. ಆದರೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಈವರೆಗೆ ಸಮಸ್ಯೆ ಬಗೆಹರಿಸದೆ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ತಕ್ಷಣ ಇಂಧನ ಸಚಿವರು ಮಧ್ಯ ಪ್ರವೇಶಿಸಿ ನೌಕರರನ್ನು ಖಾಯಂ ಮಾಡಬೇಕು, ಕನಿಷ್ಠ ವೇತನ ನಿಗದಿ ಪಡಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಗ್ರಾಚುಯಿಟಿ ನೀಡಬೇಕು, ಇಲ್ಲದಿದ್ದೆರ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.