ಸ್ವಯಂಚಾಲಿತ ಶಬ್ದವಿಲ್ಲದೆ ಪ್ಲಾಸ್ಟಿಕ್ ಬಾಟಲ್ ಪುಡಿ ಮಾಡುವ ಯಂತ್ರ ಸ್ಥಾಪನೆ

ಮ್ಯೆಸೂರು: ಮೈಸೂರು ನಗರವನ್ನು ಹಸಿರು ನಗರವನ್ನಾಗಿ ಮಾಡುವದಕ್ಕೆ ಒಂದು ಸಣ್ಣ ಹೆಜ್ಜೆಯನ್ನು ಇಲ್ಲಿನ ರೈಲ್ವೆ ನಿಲ್ದಾಣದ
ವತಿಯಿಂದ ಶುರು ಮಾಡಲಾಗಿದೆ. ಇಲ್ಲಿನ ರೈಲ್ವೆ ನಿಲ್ದಾಣದ ಕಟ್ಟಡಗಳು ಮತ್ತು ರೈಲ್ವೆ ಪ್ಲಾಟ್ಪಾರಂಗಳಲ್ಲಿ ಪ್ರಯಾಣಿಕರು ಉಪಯೋಗಿಸಿ ಬಿಸಾಡಿದ ಪ್ಲಾಸ್ಟಿಕ್ ಬಾm ಲ್‍ಗಳಿಂದ ನಿಲ್ದಾಣದ ಸೌಂದರ್ಯ ಮತ್ತು ನಗರದ ಸೌಂದರ್ಯ ಹಾಳಾಗಿತ್ತಿತ್ತು.
ಇದನ್ನು ನಿಯಂತ್ರಿಸಲು ಇಲ್ಲಿನ ರ್ಯೇಲ್ವೆ ಇಲಾಖೆಯು ಸ್ವಯಂಚಾಲಿತ ಶಬ್ದವಿಲ್ಲದೆ ಪ್ಲಾಸ್ಟಿಕ್ ಬಾಟಲ್‍ಗಳನ್ನು ಪುಡಿ ಮಾಡುವ ಯಂತ್ರವನ್ನು ಇಲ್ಲಿನ ರ್ಯೇಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾಗಿದೆ. ಪ್ಲಾಸ್ಟಿಕ್ ಬಾಟೆಲ್‍ಗಳನ್ನು ಯಂತ್ರದ ಹೊಳಗಡೆ ಹಾಕಿದರೆ ಅದು ಪುಡಿಪುಡಿಯಾಗಿ ಒಳ್ಳೆಯ ಪ್ಲಾಸ್ಟಿಕ್ ಪೀಸ್‍ಗಳಾಗಿ ಹೊರಬರುತ್ತದೆ. ಇದರಿಂದ ರ್ಯೇಲ್ವೆ ನಿಲ್ದಾಣದ ಸ್ವಚ್ಚತೆ ಕಾಪಾಡುವುದಲ್ಲದೆ ರ್ಯೇಲ್ವೆ ಇಲಾಖೆಗೆ ಆದಾಯವೂ ಬರುತ್ತದೆ. ಇದು ಮ್ಯೆಸೂರು ನಗರವನ್ನು ಹಸಿರು ನಗರವನ್ನಾಗಿ ಮಾಡುವುದಕ್ಕೆ ಇದು ಒಂದು ಉದಾಹರಣೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ