![father-murder-son](http://kannada.vartamitra.com/wp-content/uploads/2018/02/father-murder-son-647x381.jpg)
ಕೊಪ್ಪಳ, ಮಾ.22- ಆಭರಣಕ್ಕಾಗಿ ಪಕ್ಕದ ಮನೆಯ ಮಗುವನ್ನು ಮಹಿಳೆಯೊಬ್ಬಳು ಕೊಲೆ ಮಾಡಿರುವ ಘಟನೆ ಕುಕನೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರತಿಭಾ ಕೊಲೆಯಾದ ಒಂದೂವರೆ ವರ್ಷದ ಮಗು.
ಕುಕನೂರಿನ ಯಡಿಯಾಪುರದ ಗ್ರಾಮದಲ್ಲಿ ಮನೆಯ ಮುಂದೆ ನಿನ್ನೆ ಸಂಜೆ ಪ್ರತಿಭಾ ಆಟವಾಡಿಸುತ್ತಿದ್ದಾಗ ಪಕ್ಕದ ಮನೆಯ ಅಂಬವ್ವ ಎಂಬಾಕೆ ಮಗುವನ್ನು ಕರೆದುಕೊಂಡು ಹೋಗಿದ್ದಾಳೆ. ಮಗುವಿನ ಮೈ ಮೇಲಿದ್ದ ಒಡವೆಗಳನ್ನು ಬಿಚ್ಚಿಸಿಕೊಂಡು ನಂತರ ಉರುಳು ಹಾಕಿ ಕೊಂದಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.
ಆರೋಪಿ ಅಂಬವ್ವ ಪೆÇಲೀಸರ ವಶದಲ್ಲಿದ್ದು , ಕುಕನೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.