ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮೇಲೆ ಎಫ್‍ಐಆರ್ :

ಜೋಧ್‍ಪುರ್ (ರಾಜಸ್ಥಾನ), ಮಾ. 22- ಕ್ರಿಕೆಟ್ ಅಂಗಳದಲ್ಲಿ ತನ್ನ ಆಟದಿಂದ ಹೆಸರುವಾಸಿಯಾಗಿರುವ ಯುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮೇಲೆ ಎಫ್‍ಐಆರ್ ದಾಖಲಾಗಿದೆ.  ಹಾರ್ದಿಕ್ ಕಳೆದ ಡಿಸೆಂಬರ್ 26ರಂದು ತಮ್ಮ ಟ್ವೀಟ್ಟರ್‍ನಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ್ದು ಅದರ ಬಗ್ಗೆ ರಾಜಸ್ಥಾನದ ಜಲೊರೆ ಜಿಲ್ಲಾ ರಾಷ್ಟ್ರೀಯ ಭೀಮಾ ಸೇನದ ಸದಸ್ಯ ಡಿ.ಆರ್.ಮೇಘ್‍ವಾಲ್ ಎಂಬುವರು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.
ಮೇಘ್‍ವಾಲ್ ನೀಡಿರುವ ದೂರಿನ ಅನ್ವಯ ಹಾರ್ದಿಕ್ ಪಾಂಡ್ಯ, ಕಳೆದ ಡಿಸೆಂಬರ್‍ನಲ್ಲಿ ತಮ್ಮ ಟ್ವೀಟ್ಟರ್‍ನಲ್ಲಿ ಯಾವ ಅಂಬೇಡ್ಕರ್…? ಎಂದು ಪ್ರಶ್ನಿಸಿರುವುದೇ ಅಲ್ಲದೆ ಕಾನೂನು ಕಟ್ಟಲೆಗಳನ್ನು ಮೀರಿ ಈ ದೇಶದಲ್ಲಿ ಜಾತೀಯತೆ ಹಾಗೂ ಮೀಸಲಾತಿ ಎಂಬ ಕೆಟ್ಟ ರೋಗವನ್ನು ಹರಡಿದವರೇ ಅಂಬೇಡ್ಕರ್ ಎಂದು ಕಟುವಾಗಿ ಟೀಕಿಸಿದ್ದರು.
ಈ ಹೇಳಿಕೆಯಿಂದ ಡಾ.ಅಂಬೇಡ್ಕರ್‍ಗೆ ಅವಮಾನವಾಗಿರುವುದೇ ಅಲ್ಲದೆ ನಮ್ಮ ಇಡೀ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದಾರೆ. ಆದ್ದರಿಂದ ಪಾಂಡ್ಯಾರ ಈ ವರ್ತನೆಗೆ ತಕ್ಕ ಶಿಕ್ಷೆ ಆಗಲೇಬೇಕೆಂದು ಆಗ್ರಹಿಸಿದ್ದಾರೆ.
ಹಾರ್ದಿಕ್ ಪಾಂಡ್ಯಾರ ವರ್ತನೆಯ ಬಗ್ಗೆ ವಿಚಾರಣೆ ನಡೆಸಿರುವ ವಿಶೇಷ ನ್ಯಾಯಾಲಯವು ಪಾಂಡ್ಯಾ ವಿರುದ್ಧ ಎಫ್‍ಐಆರ್ ರಾಜಸ್ಥಾನ್ ಪೆÇಲೀಸರಿಗೆ ನಿದರ್ಶನ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ