ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಮತ್ತು ತೆರಿಗೆ ವಂಚನೆ ಆರೋಪದ ಮತ್ತು ಸಾಕ್ಷಿ ನಾಶ ಪಡಿಸಿದ ಪ್ರಕರಣದಲ್ಲಿ ಇಂದು ಸಚಿವ
ಡಿ.ಕೆ.ಶಿವಕುಮಾರ್ ಜಾಮೀನು ಆರ್ಜಿ ಸಲ್ಲಿಸಿದ್ದರು.
ವಾದ ಮತ್ತು ವಿವಾದಗಳನ್ನು ಆಲಿಸಿದ ನಂತರ ವಿಶೇಷ ಅರ್ಥಿಕ ಆಪರಾದಗಳ ನ್ಯಾಯಾಲಯದಿಂದ ಷರತ್ತು ಬದ್ದ ಜಾಮೀನು
ಮಂಜೂರು ಮಾಡಿತು. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕಟ್ಟಡದಲ್ಲಿರುವ ವಿಶೇಷ ನ್ಯಾಯಲಯ, ರೂ. 25000/- ಶ್ಯೂರಿಟಿ, ಮತ್ತು ಇಬ್ಬರ ಶ್ಯೂರಿಟಿಗೆ ಕೋರ್ಟ್ ಸೂಚನೆನೀಡಿತು, ಸಾಕ್ಷ್ಯಗಳ ನಾಶ ಮಾಡಬಾರದು ಮತ್ತು ಸಾಕ್ಷಿಗಳ ಮೇಲೆ ಯಾವುದೆ ರೀತಿ ಪ್ರಭಾವ ಬೀರಬಾರದು, ತನಿಖೆಗೆ ಸಹಕಾರ ನೀಡುವಂತೆ ಷರತ್ತು ಹಾಕಿದ ನ್ಯಾಯಲಯ, ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ನೀಡಿದೆ.. ಜಾಮೀನು ಮಂಜೂರಾದ ಹಿನ್ನಲೆ, ಸಚಿವ ಡಿ.ಕೆ.ಶಿವಕುಮಾರ್ ಬಂಧನದ ಭೀತಿಯಿಂದ ಪಾರಾದರು.