ನಾಸಿಕ್, ಮಾ.22- ಮಹಾರಾಷ್ಟ್ರದ ನಾಸಿಕ್ನಲ್ಲಿ ನದಿಯೊಂದರ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಪೆÇಲೀಸರು ಪತ್ತೆ ಮಾಡಿದ್ದಾರೆ.
ನಾಸಿಕ್ನ ದೇವಾಲಯಗಳ ನಗರಿ ತ್ರಯಂಬಕೇಶ್ವರ ಪಟ್ಟಣದ ನಸರ್ದಿ ನದಿಯ ಸೇತುವೆ ಕೆಳಗೆ ಗುಂಡುಗಳು ಪತ್ತೆಯಾದ ನಂತರ ಸ್ಥಳೀಯರು ಸತ್ಪೂರ್ ಪೆÇಲೀಸರಿಗೆ ನಿನ್ನೆ ಈ ಬಗ್ಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಧಾವಿಸಿದ ಪೆÇಲೀಸರು ಆ ಪ್ರದೇಶದಲ್ಲಿ ತೀವ್ರ ಶೋಧ ನಡೆಸಿದಾಗ 212 ಜೀವಂತ ಗುಂಡುಗಳು, 56 ಖಾಲಿ ಕವಚಗಳೂ ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಪತ್ತೆಯಾದವು. ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.