ನೆಲಮಂಗಲ, ಮಾ.21- ಚಿನ್ನದ ಅಂಗಡಿಯೊಂದರ ಮಾಲೀಕನಿಗೆ ಲಾಂಗು ತೋರಿಸಿ ಬೆದರಿಸಿ 17 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದೊಯ್ದಿದ್ದ ನಾಲ್ವರು ಆರೋಪಿಗಳನ್ನು ಮಾದನಾಯಕನಹಳ್ಳಿ ಠಾಣೆ ಪೆÇಲೀಸರು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ರವಿಕುಮಾರ್ ಅಲಿಯಾಸ್ ರವಿ(24), ರಾಜೇಶ್ ಅಲಿಯಾಸ್ ರಾಜ(23) ಹಾಗೂ ಮೂವರು ಕಾನೂನು ಸಂಘರ್ಷಕ್ಕೆ ಒಳಗಾದವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಘಟನೆ ವಿವರ:
ಮಾಗಡಿ ರಸ್ತೆ, ಮಾಚೋಹಳ್ಳಿ ಗೇಟ್ ಬಳಿ ಇರುವ ಅಂಬೆ ಜ್ಯೂವೆಲರ್ಸ್ ಚಿನ್ನದ ಅಂಗಡಿಗೆ ಮಾ.5ರಂದು ರಾತ್ರಿ 9 ಗಂಟೆ ಸಂದರ್ಭದಲ್ಲಿ ಮಾಲೀಕ ಬಾಗಿಲು ಹಾಕಲು ಮುಂದಾಗುತ್ತಿದ್ದಾಗ ಐದು ಮಂದಿ ದರೋಡೆಕೋರರು ಏಕಾಏಕಿ ಒಳಗೆ ನುಗ್ಗಿ ಲಾಂಗ್ ತೋರಿಸಿ ಬೆದರಿಸಿ ಅಂಗಡಿಯಲ್ಲಿದ್ದ ಸುಮಾರು 550 ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗುತ್ತಿದ್ದಾಗ ಒಬ್ಬ ಬಾಲಪರಾಧಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದನು.
ಈತನನ್ನು ಪೆÇಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿ ಉಳಿದ ಆರೋಪಿಗಳಿಗಾಗಿ ತನಿಖೆ ಕೈಗೊಂಡು ರವಿಕುಮಾರ್ ಅಲಿಯಾಸ್ ರವಿ(24), ರಾಜೇಶ್ ಅಲಿಯಾಸ್ ರಾಜ(23) ಹಾಗೂ ಮೂವರು ಕಾನೂನು ಸಂಘರ್ಷಕ್ಕೆ ಒಳಗಾದವರನ್ನು ಬಂಧಿಸಿದ್ದಾರೆ.
ದರೋಡೆಕೋರರಾದ ರವಿಕುಮಾರ್ ಹಾಗೂ ರಾಜೇಶ್ ವಿರುದ್ಧ ವಿವಿಧ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಇವರಿಬ್ಬರು ಅಂಬೆ ಜ್ಯೂವೆಲ್ಸ್ ಎದುರಿನ ಲೇಔಟ್‍ನಲ್ಲಿ ಮನೆ ಮಾಡಿಕೊಂಡು ಅಪ್ರಾಪ್ತ ಯುವಕರನ್ನು ಜತೆಯಲ್ಲಿಟ್ಟುಕೊಂಡು ದರೋಡೆಗೆ ಬಳಸಿಕೊಳ್ಳುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಆರೋಪಿಗಳಿಂದ ಎರಡು ಬಜಾಜ್ ಫಲ್ಸರ್ ಬೈಕ್. 550 ಗ್ರಾಂ ಚಿನ್ನಾಭರಣ, ನಾಲ್ಕು ಲಾಂಗ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಳೇದ್ ಅವರು ವಿವರಿಸಿದರು.