ಬೆಳಗಾವಿ, ಮಾ.21-ಮದುವೆಗೆ ಒತ್ತಾಯಿಸಿದ್ದ ಪ್ರೇಯಸಿಯನ್ನು ಪ್ರವಾಸಕ್ಕೆಂದು ಕರೆದೊಯ್ದ ಪ್ರಿಯಕರ ರೈಲಿನಿಂದ ತಳ್ಳಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪೂನಂ (22) ಹತ್ಯೆಯಾದ ನತದೃಷ್ಟೆ.
ಕಳೆದ 15ರಂದು ಜಿಲ್ಲೆಯ ಅಸ್ಟೋಳಿ ಗ್ರಾಮದ ರೈಲ್ವೆ ಸೇತುವೆ ಮೇಲೆ ಈಕೆಯ ಶವ ಪತ್ತೆಯಾಗಿತ್ತು. ಪೂನಂ ಪೆÇೀಷಕರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಖಾನಾಪುರ ಪೆÇಲೀಸರು, ಪೂನಂಳ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ, ತನಿಖೆ ನಡೆಸಿ ಪೂನಂ ಪ್ರೀತಿಸುತ್ತಿದ್ದ ಬಿಎಚ್ಎಂಎಸ್ ವೈದ್ಯ ಸುನಿಲ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ರೈಲಿನಿಂದ ಆಕೆಯನ್ನು ತಳ್ಳಿ ಕೊಲೆ ಮಾಡಿದ್ದಾಗಿ ಬಾಯಿಬಿಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದಕ್ಕೆ ಸಹಕರಿಸಿದ ಈತನ ಸಹೋದರ ಸಂಜಯ್ನನ್ನು ಬಂಧಿಸಿದ್ದಾರೆ.
ಹಿನ್ನೆಲೆ: ಪೂನಂ ಮತ್ತು ಸುನಿಲ್ ಪ್ರೀತಿಸುತ್ತಿದ್ದು, ಪೂನಂ ಮದುವೆಯಾಗುವಂತೆ ಸುನಿಲ್ನನ್ನು ಒತ್ತಾಯಿಸಿದ್ದಾಳೆ. ಆದರೆ, ಅಂತರ್ಜಾತಿ ಹಿನ್ನೆಲೆಯಲ್ಲಿ ಸುನಿಲ್ ಮದುವೆಯನ್ನು ಮುಂದೂಡುತ್ತಲೇ ಬಂದಿದ್ದನು.
ತದನಂತರ ಈಕೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಹೋದರ ಸಂಜಯ್ ಜತೆ ಪೂನಂ ಹತ್ಯೆ ಮಾಡಲು ಆರೋಪಿ ಪ್ರಿಯಕರ ಸಂಚು ರೂಪಿಸಿದ್ದಾನೆ.
ಅದರಂತೆಯೇ ಗೋವಾ ಪ್ರವಾಸಕ್ಕೆಂದು ಪೂನಂಳನ್ನು ಮಾ.15ರಂದು ರೈಲಿನಲ್ಲಿ ಕರೆದೊಯ್ದು ಸಂಚಿನಂತೆ ಸಹೋದರನ ಜತೆ ಅಸ್ಟೋಳಿ ಗ್ರಾಮದ ಬಳಿ ಪೂನಂಳ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ರೈಲಿನಿಂದ ತಳ್ಳಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ನಿನ್ನೆ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.