ತೋಟದ ಮನೆಯೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದ 10 ಮಂದಿಯನ್ನು ಜಿಲ್ಲಾ ಅಪರಾಧ ಪತ್ತೆದಳ ವಿಭಾಗದ ಸಿಬ್ಬಂದಿ ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ:

ತುಮಕೂರು, ಮಾ.21- ತೋಟದ ಮನೆಯೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದ 10 ಮಂದಿಯನ್ನು ಜಿಲ್ಲಾ ಅಪರಾಧ ಪತ್ತೆದಳ ವಿಭಾಗದ ಸಿಬ್ಬಂದಿ ಬಂಧಿಸಿ ದ್ವಿಚಕ್ರ ವಾಹನ, ಕಾರು, 15ಕ್ಕೂ ಹೆಚ್ಚು ಮೊಬೈಲ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಾವಗಡ ತಾಲೂಕಿನ ಮಲ್ಲೇನಹಳ್ಳಿಯ ತೋಟದ ಮನೆಯೊಂದರಲ್ಲಿ ಜೂಜಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ರಾತ್ರಿ ಸಬ್‍ಇನ್ಸ್‍ಪೆಕ್ಟರ್ ಸಿಬ್ಬಂದಿಗಳಾದ ಅಯೂಬ್‍ಖಾನ್, ಮಲ್ಲೇಶ್, ನಾಗರಾಜ್, ಮಹೇಶ್ ದಾಳಿ ನಡೆಸಿದ್ದಾರೆ.
ಜೂಜಾಟದಲ್ಲಿ ತೊಡಗಿದ್ದ 10 ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ 57 ಸಾವಿರಕ್ಕೂ ಹೆಚ್ಚು ನಗದು, ದ್ವಿಚಕ್ರ ವಾಹನ, ಕಾರು 15ಕ್ಕೂ ಹೆಚ್ಚು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.
ಕೋರಾ ಪೆÇಲೀಸ್ ಠಾಣೆ: ತೋಟದ ಮನೆಯಲ್ಲಿ ಜೂಜಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕೋರಾ ಪೆÇಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಇ.ಪಿ.ರಾಜು ಹಾಗೂ ಸಿಬ್ಬಂದಿವರ್ಗದವರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಂಚಂಗಿ ಗ್ರಾಮದ ನಿವಾಸಿ ಮಂಜುನಾಥ್ ಮತ್ತು ಹಾಲೇಶ್ ಬಂಧಿತರು.
ತೋಟದ ಮನೆಯಲ್ಲಿ ಜೂಜಾಡುತ್ತಿದ್ದ ಖಚಿತ ಮಾಹಿತಿ ಪಡೆದ ಪೆÇಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದು, 14 ದ್ವಿಚಕ್ರ ವಾಹನ, 2 ಕಾರು, ನಗದನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ಪರಾರಿಯಾಗಿರುವ 10 ಮಂದಿಗಾಗಿ ಪೆÇಲೀಸರು ಬಲೆ ಬೀಸಿದ್ದಾರೆ.
ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲು: ಜೂಜಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಪಡೆದ ವಿವಿಧ ಠಾಣೆ ಪೆÇಲೀಸರು ಜೂಜುಕೋರರನ್ನು ಬಂಧಿಸಿದ್ದಾರೆ.
ಮಧುಗಿರಿ ಠಾಣೆಯಲ್ಲಿ 2 ಪ್ರಕರಣ, ಕೊಡಿಗೇಹಳ್ಳಿಯಲ್ಲಿ 2, ಬಡವನಹಳ್ಳಿಯಲ್ಲಿ 2, ಕೊರಟಗೆರೆಯಲ್ಲಿ 2, ಕೋಳಾಲದಲ್ಲಿ 2, ತಿರುಮಣಿಯಲ್ಲಿ 6, ವೈಎನ್‍ಎಸ್ ಕೋಟೆಯಲ್ಲಿ 3 ಸೇರಿದಂತೆ ಇನ್ನಿತರ ಕಡೆ ಆರೋಪಿಗಳನ್ನು ಬಂಧಿಸಿರುವುದಾಗಿ ಡಿವೈಎಸ್‍ಪಿ ಕಲ್ಲೇಶಪ್ಪ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ