ನವದೆಹಲಿ, ಮಾ.21- ಬಹುಕೋಟಿ ರೂ.ಗಳ 2-ಜಿ ಸ್ಪೆಕ್ಟ್ರಂ ಹಗರಣದಲ್ಲಿ ಖುಲಾಸೆಗೊಂಡಿದ್ದ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ, ಡಿಎಂಕೆ ಸಂಸದೆ ಕನಿಮೋಳಿ ಸೇರಿದಂತೆ ಈ ಪ್ರಕರಣದ ಎಲ್ಲ 19 ಮಂದಿಗೆ ದೆಹಲಿ ಹೈಕೋರ್ಟ್ ನೋಟಿಸ್ಗಳನ್ನು ಜಾರಿಗೊಳಿಸಿದೆ. ಈ ಬೆಳವಣಿಗೆಯಿಂದಾಗಿ 2-ಜಿ ಹಗರಣ ಮತ್ತೆ ಇವರೆಲ್ಲರ ಕೊರಳು ಸುತ್ತಿಕೊಳ್ಳುವ ಸಾಧ್ಯತೆ ಇದೆ.
ಕಳೆದ ವರ್ಷ ಡಿಸೆಂಬರ್ 21ರಂದು ಸಿಬಿಐ ವಿಶೇಷ ನ್ಯಾಯಾಲಯ ಈ ಹಗರಣದ ಎಲ್ಲ 19 ಮಂದಿಯನ್ನು ಖುಲಾಸೆಗೊಳಿಸಿತ್ತು. ಇದರ ವಿರುದ್ಧ ನವದೆಹಲಿಯ ಜಾರಿ ನಿರ್ದೇಶನಾಲಯ ಮಾ.19ರಂದು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಈಗ ಎ. ರಾಜಾ, ಕನಿಮೋಳಿ ಸಹಿತ 19 ಮಂದಿಗೆ ನೋಟಿಸ್ಗಳನ್ನು ಜಾರಿಗೊಳಿಸಿರುವ ನ್ಯಾಯಮೂರ್ತಿ ಎಸ್.ಪಿ.ಗರ್ಗ್ ಮಾ.26ರಂದು ವಿಚಾರಣೆ ನಡೆಸಲಿದ್ದಾರೆ.