ಮುಂಬೈ:ಮಾ-21:ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಪಂದ್ಯಕ್ಕಾಗಿ ಹೇರ್ ಸ್ಟೈಲ್ ಬದಲಾಗಿದ್ದು, ಹೊಸ ಲುಕ್ ನಲ್ಲಿ ಮಿಂಚಲಿದ್ದಾರೆ. ತಮ್ಮ ಬ್ಯಾಟಿಂಗ್ ಮತ್ತು ನಾಯಕತ್ವ ಮಾತ್ರವಲ್ಲ ಫಿಟ್ನೆಸ್ ಹಾಗೂ ಸ್ಟೈಲ್ ಐಕಾನ್ ಆಗಿಯೂ ಕೊಹ್ಲಿ ಸದ್ದು ಮಾಡಿದ್ದಾರೆ.
ಐಪಿಎಲ್ ಗಾಗಿ ಹೊಸ ಕೇಶ ವಿನ್ಯಾಸದ ಫೋಟೋವನ್ನು ಕೊಹ್ಲಿ ತನ್ನ ಟ್ವೀಟರ್ ಖಾತೆಗೆ ಹಾಕಿದ್ದಾರೆ. ಮುಂಬಯಿನ ಹೆಸರಾಂತ ಹಾಗೂ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೀಮ್ ಹಕಿಮ್, ಕೊಹ್ಲಿಯ ಈ ನೂತನ ಲುಕ್ನ ಶಿಲ್ಪಿಯಾಗಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಆರ್ಸಿಬಿ ವಿರಾಟ್ ಕೊಹ್ಲಿಯನ್ನು ತಂಡದಲ್ಲೆ ಮುಂದುವರೆಸಿತ್ತು. ಇದಕ್ಕಾಗಿ ಕೊಹ್ಲಿಗೆ ಬರೋಬ್ಬರಿ 17 ಕೋಟಿ ರುಪಾಯಿ ನೀಡಿದೆ. ಏಪ್ರಿಲ್ 7ರಿಂದ ಐಪಿಎಲ್ ಮಹಾ ಸಮರ ಶುರುವಾಗಲಿದೆ.
Indian Premier League 2018, Virat Kohli,New Hairstyle