ವಾಷಿಂಗ್ಟನ್:ಮಾ-21: ಹೆಚ್-1ಬಿ ವೀಸಾಗಳಿಗೆ ಅರ್ಜಿಗಳನ್ನು ಮುಂದಿನ ತಿಂಗಳು ಏಪ್ರಿಲ್ 2 ರಿಂದ ಸ್ವೀಕರಿಸಲಾಗುವುದು ಎಂದು ಅಮೆರಿಕಾದ ಫೆಡರಲ್ ಏಜೆನ್ಸಿ ತಿಳಿಸಿದೆ.
ಅದೇ ರೀತಿ ಎಲ್ಲಾ ಹೆಚ್-1ಬಿ ವೀಸಾ ಅರ್ಜಿಗಳ ಪ್ರೀಮಿಯಂ ಪ್ರೊಸೆಸ್ಸಿಂಗ್ ಗಳನ್ನು ವಾರ್ಷಿಕ ವೀಸಾ ನೀಡಿಕೆಯ ಮಿತಿಯ ಆಧಾರದಲ್ಲಿ ರದ್ದುಪಡಿಸಲಾಗುವುದು ಎಂದು ಅಮೆರಿಕಾ ನಾಗರಿಕ ಮತ್ತು ವಲಸೆ ಸೇವೆ(ಯುಎಸ್ ಸಿಐಎಸ್) ತಿಳಿಸಿದೆ.
ಅಮೆರಿಕಾದ ಆರ್ಥಿಕ ವರ್ಷ 2019 ಪ್ರಸಕ್ತ ಸಾಲಿನ ಅಕ್ಟೋಬರ್ 1ರಿಂದ ಆರಂಭವಾಗಲಿದ್ದು ಅದಕ್ಕೆ ಮುನ್ನ ಹೆಚ್-1ಬಿ ವೀಸಾ ನೀಡಿಕೆಯ ಪ್ರಕ್ರಿಯೆ ಮುಗಿಯುತ್ತದೆ.ಎಲ್ಲಾ ಹೆಚ್-1ಬಿ ವೀಸಾಗಳ ವಾರ್ಷಿಕ ಭರ್ತಿಯ ಮಿತಿಯ ಪ್ರೀಮಿಯಂ ಪ್ರಕ್ರಿಯೆಗಳ ರದ್ದತಿಯ ಅವಧಿಯನ್ನು ಸೆಪ್ಚೆಂಬರ್ 10ರವರೆಗೆ ವಿಸ್ತರಿಸುವ ಸಾಧ್ಯತೆಯಿದೆ. ತಾತ್ಕಾಲಿಕವಾಗಿ ಪ್ರೀಮಿಯಂ ಪ್ರಕ್ರಿಯೆಗಳು ಹೆಚ್1-ಬಿಯ ಒಟ್ಟಾರೆ ಪ್ರಕ್ರಿಯೆ ಅವಧಿಯನ್ನು ಕಡಿಮೆ ಮಾಡಲಿದೆ ಎಂದು ಯುಎಸ್ ಸಿಐಎಸ್ ತಿಳಿಸಿದೆ.
ಹೆಚ್-1ಬಿ ವೀಸಾ ವಲಸೆರಹಿತ ವೀಸಾವಾಗಿದ್ದು ಇದರಡಿ ಅಮೆರಿಕಾದ ಕಂಪೆನಿಗಳು ವಿದೇಶಿ ತಾಂತ್ರಿಕ ನೌಕರರನ್ನು ನೇಮಕಾತಿ ಮಾಡಿಕೊಳ್ಳಲು ನೀಡುವುದಾಗಿದೆ. ಭಾರತ, ಚೀನಾ ಸೇರಿದಂತೆ ಪ್ರತಿವರ್ಷ ಸಾವಿರಾರು ನೈಪುಣ್ಯಯುತ ನೌಕರರನ್ನು ನೇಮಕಾತಿ ಮಾಡಿಕೊಳ್ಳಲು ತಂತ್ರಜ್ಞಾನ ಆಧಾರಿತ ಕಂಪೆನಿಗಳು ಹೆಚ್-1ಬಿ ವೀಸಾವನ್ನು ನಂಬಿಕೊಂಡಿವೆ.
ಅಮೆರಿಕಾ ಕಾಂಗ್ರೆಸ್ ನ ಕಡ್ಡಾಯದಂತೆ ಪ್ರತಿವರ್ಷ ಹೆಚ್-1ಬಿ ವೀಸಾವನ್ನು 65 ಸಾವಿರದವರೆಗೆ ನೀಡಬಹುದು ಎಂಬ ಮಿತಿಯನ್ನು ಹೇರಲಾಗಿದೆ.ಮೊದಲ 20,000 ವೀಸಾಗಳು ಅಮೆರಿಕಾದ ಸ್ನಾತಕೋತ್ತರ ಡಿಗ್ರಿ ಅಥವಾ ಉನ್ನತ ವ್ಯಾಸಂಗ ಮಾಡುವವರಿಗೆ ನೀಡಿಕೆಯಲ್ಲಿ ಮಿತಿಯಲ್ಲಿ ವಿನಾಯಿತಿ ನೀಡಲಾಗಿದೆ.
H-1B visa, application process,begin from April 2