ಬೆಂಗಳೂರು ಮಾ.21-ವ್ಯಕ್ತಿಯೊಬ್ಬರ ಬಳಿ ಸಹಾಯಕ್ಕೆಂದು ಮೊಬೈಲ್ ಪಡೆದು ಬೈಕ್ನಲ್ಲಿ ವಂಚಕ ಪರಾರಿಯಾಗಿರುವ ಘಟನೆ ಬಸವನಗುಡಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ ಆರ್.ವಿ.ರಸ್ತೆಯ ವಿಜಯ ಕಾಲೇಜು ಬಸ್ನಿಲ್ದಾಣದ ಬಳಿ ವೀರೇಶ್ ಎಂಬುವರು ನಿಂತಿದ್ದಾಗ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿ ತನ್ನ ಬಳಿ ಮೊಬೈಲ್ ಇಲ್ಲ. ಅರ್ಜೆಂಟಾಗಿ ಬೇರೊಬ್ಬರಿಗೆ ಕರೆ ಮಾಡಬೇಕೆಂದು ತಮ್ಮ ಮೊಬೈಲ್ ಕೊಡಿ ಎಂದು ವೀರೇಶ್ಗೆ ಕೇಳಿದ್ದಾನೆ.
ಈತನ ಮಾತನ್ನು ನಂಬಿದ ವೀರೇಶ್ ಅವರು, ಮೊಬೈಲ್ ಕೊಡುತ್ತಿದ್ದಂತೆ ಯಾರಿಗೋ ಕರೆ ಮಾಡುವಂತೆ ನಟಿಸಿ ಮೊಬೈಲ್ನೊಂದಿಗೆ ಬೈಕ್ನಲ್ಲಿ ಪರಾರಿಯಾಗಿದ್ದಾನೆ.