![download](http://kannada.vartamitra.com/wp-content/uploads/2018/03/download-20-678x339.jpg)
ಬೆಂಗಳೂರು, ಮಾ.21-ವ್ಯಕ್ತಿಯೊಬ್ಬರನ್ನು ಅಪಹರಿಸಿ, ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿ ಮತ್ತಷ್ಟು ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದ ಐವರು ಆರೋಪಿಗಳನ್ನು ಗಿರಿನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಬ್ಯಾಟರಾಯನಪುರದ ಶಿವಕುಮಾರ್ ಅಲಿಯಾಸ್ ಶಿವು ಅಲಿಯಾಸ್ ಕರಿಯಾ(24), ವಿನೋಬಾ ಕಾಲೋನಿಯ ಮಂಜೇಶ ಅಲಿಯಾಸ್ ಮಂಜಾ ಅಲಿಯಶ್ ಬೆಣ್ಣೆ (24), ಅವಲಹಳ್ಳಿಯ ಶ್ರೀನಿವಾಸ ಅಲಿಯಾಸ್ ಸೀನಾ(24), ಹನುಮಂತನಗರದ ಶಶಿಕುಮಾರ್ ಅಲಿಯಾಸ್ ಶಶಿ(24) ಹಾಗೂ ವಿನೋಬಾ ಕಾಲೋನಿಯ ನಾಗರಾಜ ಅಲಿಯಾಸ್ ನಾಗ (24) ಬಂಧಿತ ಆರೋಪಿಗಳು. ಅವರಿಂದ ಕೃತ್ಯಕ್ಕೆ ಬಳಸಿದ್ದ ಬಿಳಿ ಟೋಯೊಟಾ ಇಟಿಯೋಸ್ ಕಾರು, 2,000 ರೂ. ನಗದು, ಒಂದು ಬಾಕು ಹಾಗೂ ಮಚ್ಚನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ನಾಪತ್ತೆಯಾಗಿರುವ ಮತ್ತೊಬ್ಬ ಆರೋಪಿ ಶಿವು ಎಂಬಾತನಿಗಾಗಿ ಪೆÇಲೀಸರು ಶೋಧ ಮುಂದುವರಿಸಿದ್ದಾರೆ.
ಬಿ.ವಿ.ಶಿವಕುಮಾರ್ ಎಂಬುವರು ಮಾರ್ಚ್ 8ರಂದು ರಾತ್ರಿ 11 ಗಂಟೆಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದರು. ಆಗ ಕಾರಿನಲ್ಲಿ ಹಿಂಬಾಲಿಸಿದ ಆರೋಪಿಗಳು ಹಿಂದಿನಿಂದ ಬೈಕ್‍ಗೆ ಗುದ್ದಿಸಿದರು. ಆಗ ಶೇಖರ್ ಮತ್ತು ಯುವಕರ ನಡುವೆ ಜಗಳವಾಯಿತು. ನಂತರ ಆರೋಪಿಗಳು ಅವರನ್ನು ಕಾರಿನಲ್ಲಿ ಬಲವಂತವಾಗಿ ಅಪಹರಿಸಿ ಹಲ್ಲೆ ನಡೆಸಿ ಅವರ ಬಳಿ ಇದ್ದ 10,000 ರೂ.ಗಳನ್ನು ಕಿತ್ತುಕೊಂಡು, ಮತ್ತಷ್ಟು ಹಣ ನೀಡಬೇಕೆಂದು ಬೆದರಿಕೆ ಹಾಕಿದ್ದರು.
ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಬಂದ ಶೇಖರ್ ಮರುದಿನ ಗಿರಿನಗರ ಪೆÇಲೀಸ್ ಠಾಣೆಗೆ ದೂರು ನೀಡಿದ್ದರು. ದಕ್ಷಿಣ ವಿಭಾಗ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಅವರ ಮಾರ್ಗದರ್ಶನದಲ್ಲಿ ವಿವಿ ಪುರಂ ಉಪ ವಿಭಾಗದ ಎಸಿಪಿ ಎಚ್.ಶ್ರೀನಿವಾಸ ಅವರ ನೇತೃತ್ವದಲ್ಲಿ ಗಿರಿನಗರ ಠಾಣೆ ಇನ್ಸ್‍ಪೆಕ್ಟರ್‍ಗಳಾದ ಬಿ.ಎಂ.ಕೊಟ್ರೇಶಿ ಮತ್ತು ಜಿ.ಆರ್. ಚಿನ್ನೇಗೌಡ ಮತ್ತು ಸಿಬ್ಬಂದಿ ಒಳಗೊಂಡ ತಂಡವನ್ನು ರಚಿಸಲಾಗಿತ್ತು.
ಆರೋಪಿಗಳನ್ನು ಬಂಧಿಸಿ ವಿಚಾರಣೆ ಒಳಪಡಿಸಿದಾಗ ಕೃತ್ಯದ ಹಿಂದಿನ ಉದ್ದೇಶ ಬಯಲಾಯಿತು. ಶೇಖರ್ ಅವರು ನಡೆಸುತ್ತಿರುವ ರಿಹ್ಯಾಬಿಲಿಟೇಷನ್ ಸೆಂಟರ್‍ನಲ್ಲಿ ಪ್ರಮುಖ ಆರೋಪಿ ಶಿವಕುಮಾರ್ ಅಲಿಯಾಸ್ ಶಿವು ಕೆಲಸ ಮಾಡುತ್ತಿದ್ದನು. ಶೇಖರ್ ಅವರು ಶಿವುನಿಂದ ಕೈ-ಕಾಲು ಒತ್ತಿಸಿಕೊಂಡು ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಇದರಿಂದ ಕೋಪಗೊಂಡ ಆತ ನೌಕರಿ ತ್ಯಜಿಸಿದ್ದ. ತನ್ನನ್ನು ಹೀನಾಯವಾಗಿ ನಡೆಸಿಕೊಂಡ ಶೇಖರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಶಿವು ತನ್ನ ಸ್ನೇಹಿತರೊಂದಿಗೆ ಅಪಹರಣ ಮತ್ತು ಹಣ ವಸೂಲಿ ಮಾಡುವ ಉದ್ದೇಶ ಹೊಂದಿ ಈ ಕೃತ್ಯ ಎಸಗಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಈ ಪ್ರಕರಣದ ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಯುತ್ತಿದೆ.