ಜೆಡಿಎಸ್ ವರಿಷ್ಠರು ನಮ್ಮನ್ನು ಮಾತುಕತೆಗೆ ಆಹ್ವಾನಿಸಿದರೆ ಸಮಾಲೋಚನೆ ನಡೆಸಲು ಸಿದ್ಧರಿರುವುದಾಗಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ

Varta Mitra News

ಬೆಂಗಳೂರು ಮಾ.21-ಜೆಡಿಎಸ್ ವರಿಷ್ಠರು ನಮ್ಮನ್ನು ಮಾತುಕತೆಗೆ ಆಹ್ವಾನಿಸಿದರೆ ಸಮಾಲೋಚನೆ ನಡೆಸಲು ಸಿದ್ಧರಿರುವುದಾಗಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠರ ಮನಸ್ಥಿತಿ ನಮಗೆ ಅರ್ಥವಾಗುತ್ತಿಲ್ಲ. ರಾಜ್ಯಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿ ಎಂದು ವಿಪ್ ನೀಡಿದ್ದಾರೆ. ಮತ್ತೊಂದು ಕಡೆ ನಮ್ಮ ಶಾಸಕತ್ವ ಅನರ್ಹಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಯಾವುದಾದರೂ ಒಂದು ನಿಲುವನ್ನು ಅವರು ಹೊಂದಬೇಕು ಎಂದು ಹೇಳಿದರು.

ನಮ್ಮನ್ನು ಬೇಡವೆಂದು ತೀರ್ಮಾನಿಸಿ ಪಕ್ಷದಿಂದ ಹೊರಹಾಕಲಿ. ಹೊರಹಾಕುವುದು ಬೇಡವೆಂದರೆ ಮಾತುಕತೆಗಾದರೂ ಆಹ್ವಾನಿಸಲಿ. ಈ ಹಂತದಲ್ಲಿ ಮುಂದಿನ ರಾಜ್ಯಸಭೆ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕೆಂಬುದನ್ನು ಇನ್ನೂ ತೀರ್ಮಾನಿಸಿಲ್ಲ.

ಮಾ.23 ರಂದು ಬೆಳಗ್ಗೆ 7 ಗಂಟೆಗೆ ಜೆಡಿಎಸ್‍ನಿಂದ ಅಮಾನತುಗೊಂಡಿರುವ ಏಳು ಮಂದಿ ಶಾಸಕರು ಸಭೆ ಸೇರಿ ಚರ್ಚಿಸಿ ತೀರ್ಮಾನ ಕೈಗೊಳ್ಳೂತ್ತೇವೆ. ಈ ನಡುವೆ ಕಾನೂನು ತಜ್ಞರ ಸಲಹೆಯನ್ನು ಪಡೆದು ತೀರ್ಮಾನ ಮಾಡುತ್ತೇವೆ ಎಂದು ಬಾಲಕೃಷ್ಣ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ