ಬೆಂಗಳೂರು, ಮಾ.21- ಎಂಜಿ ಮೋಟಾರ್ ಇಂಡಿಯಾ ಕಂಪೆನಿ ಭಾರತದಲ್ಲಿ ತನ್ನ ವಹಿವಾಟನ್ನು ವೃದ್ಧಿಸುವ ನಿಟ್ಟಿನಲ್ಲಿ ಮುಂದಿನ 6 ವರ್ಷದಲ್ಲಿ 5,000 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾವಾ ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ಎಂಜಿ ಮೋಟಾರ್ಸ್ ಭಾರತದಲ್ಲಿ ತನ್ನ ಮೊದಲ ವಾಹನ ತಯಾರಿಕಾ ಘಟಕ ಸ್ಥಾಪನೆಯನ್ನು ಘೋಷಿಸಿ ಕಾರ್ಯಾರಂಭ ಮಾಡಿದೆ.
2019ರ ವೇಳೆಗೆ ಮಧ್ಯ ಭಾಗದ ವೇಳೆಗೆ ತನ್ನ ಹೊಸ ವಾಹನಗಳನ್ನು ಪರಿಚಯಿಸಲಾಗುವುದು. ಪ್ರತಿ ವರ್ಷವೂ ನವೀನ ಮಾದರಿಯ ಆಧುನಿಕ ತಂತ್ರಜ್ಞಾನದಿಂದ ಕೂಡಿದ ವಾಹನಗಳು ಹಾಗೂ ನವೀಕರಿಸಬಹುದಾದ ಇಂಧನಗಳಿಂದ ಚಾಲನೆಗೊಳ್ಳುವ ವಾಹನಗಳನ್ನು ಕೂಡ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸದ್ಯದಲ್ಲಿಯೇ ಮಾ.28ರಂದು ಮುಂಬೈನಲ್ಲಿ ತನ್ನ ಮೊದಲ ಶೋ ರೂಂ ಅನ್ನು ತೆರೆಯುತ್ತಿದ್ದು , ಏ.6 ದೆಹಲಿಯಲ್ಲಿ , ಏ.16ರಂದು ಬೆಂಗಳೂರಿನಲ್ಲಿ ವಿಭಿನ್ನವಾಗಿ ರೋಡ್ ಶೋಗಳನ್ನು ನಡೆಸುವ ಮೂಲಕ ತನ್ನ ಶೋ ರೂಂ ಅನ್ನು ಕಾರ್ಯಾರಂಭ ಮಾಡಲಾಗಿದೆ ಎಂದು ತಿಳಿಸಿದರು.