ಚೆನ್ನೈ,ಮಾ.20- ಅಯೋಧ್ಯೆಯಿಂದ ಹೊರಟಿರುವ ವಿಶ್ವ ಹಿಂದೂ ಪರಿಷತ್ನ ರಥ ಇಂದು ತಮಿಳುನಾಡು ಪ್ರವೇಶಿಸಲಿದ್ದು, ರಾಜ್ಯದ ಕೋಮು ಸೌಹಾರ್ದತೆ ಶಾಂತಿಗಾಗಿ ರಥ ಯಾತ್ರೆಗೆ ತಡೆಯೊಡ್ಡಬೇಕೆಂದು ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಮರಾಜ್ಯ ರಥಯಾತ್ರೆ ಆಗಮನ ಹಿನ್ನೆಲೆಯಲ್ಲಿ ತಿರುನೆಲೆವೆಲ್ಲಿಯಲ್ಲಿ ಮಾ.23ರ ವರೆಗೂ ನಿಷೇಧಾಜ್ಞೆ ಹೇರಲಾಗಿದ್ದು, ರಥ ಯಾತ್ರೆ ಖಂಡಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ರಾಮಜನ್ಮ ಭೂಮಿ-ಬಾಬ್ರಿ ಮಸೀದಿ ವಿವಾದ ಕೋರ್ಟ್ ತೀರ್ಪು ಹೊರ ಬೀಳುವ ವೇಳೆ ವಿಎಚ್ಪಿ ರಥ ಯಾತ್ರೆ ಕೈಗೊಂಡಿರುವುದು ಸರಿಯಲ್ಲ. ಎಂದು ವಿರೋಧ ಪಕ್ಷದ ನಾಯಕರೂ ಆಗಿರುವ ಸ್ಟಾಲಿನ್ ಆರೋಪಿಸಿದ್ದಾರೆ.