ಬೆಂಗಳೂರು, ಮಾ.20-ಚಾಕುವಿನಿಂದ ಕುತ್ತಿಗೆ ಇರಿದು ಕೂಡಿ ಹಾಕಿದ್ದ ಮಹಿಳೆಯನ್ನು ಸ್ಥಳೀಯರ ನೆರವಿನಿಂದ ಪೆÇಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೆ.ಪಿ.ಅಗ್ರಹಾರ ಪೆÇಲೀಸ್ ಠಾಣೆ ವ್ಯಾಪ್ತಿಯ ಚೋಳೂರು ಪಾಳ್ಯದ ಮಂಜುನಾಥ ನಗರದ ನಿವಾಸಿ ವೇದಕುಮಾರಿ ಎಂಬ ಮಹಿಳೆಯೇ ಪತಿಯಿಂದ ಇರಿತಕ್ಕೊಳಗಾದವರು.
ವೇದಕುಮಾರಿ -ಮಂಜುನಾಥ ದಂಪತಿ ನಡುವೆ ಕ್ಷುಲ್ಲಕ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ಪತಿ ಮಂಜುನಾಥ ಚಾಕುವಿನಿಂದ ಪತ್ನಿ ವೇದಕುಮಾರಿ ಕುತ್ತಿಗೆಗೆ ಚಾಕುವಿನಿಂದ ಇರಿದು ಮನೆಯಲ್ಲಿ ಕೂಡಿ ಹಾಕಿ ಹೊರಗೆ ಹೋಗಿದ್ದಾನೆ. ಇಂದು ಮುಂಜಾನೆ ವೇದಕುಮಾರಿಯ ಚೀರಾಟ, ನರಳಾಟ ಕೇಳಿ ಅಕ್ಕಪಕ್ಕದ ಮನೆಯವರು ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೆÇಲೀಸರು ಬಾಗಿಲು ಒಡೆದು ಮಹಿಳೆಯನ್ನು ರಕ್ಷಿಸಿ ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.