ಸಾವಿನ ದವಡೆಗೆ ಸಿಲುಕಿ ಅಚ್ಚರಿ ರೀತಿಯಲ್ಲಿ ಚೇತರಿಸಿಕೊಂಡಿರುವ ಕೀರ್ತಿ ಚಕ್ರ ಪುರಸ್ಕøತ ಸಿಆರ್‍ಪಿಎಫ್ ವೀರಾಗ್ರಣಿ ಚೇತನ್ ಕುಮಾರ್ ಚೀತಾ ಕರ್ತವ್ಯಕ್ಕೆ :

ನವದೆಹಲಿ, ಮಾ.20-ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಸೆಣಸಿ ಗುಂಡೇಟಿನಿಂದ ಸಾವಿನ ದವಡೆಗೆ ಸಿಲುಕಿ ಅಚ್ಚರಿ ರೀತಿಯಲ್ಲಿ ಚೇತರಿಸಿಕೊಂಡಿರುವ ಕೀರ್ತಿ ಚಕ್ರ ಪುರಸ್ಕøತ ಸಿಆರ್‍ಪಿಎಫ್ ವೀರಾಗ್ರಣಿ ಚೇತನ್ ಕುಮಾರ್ ಚೀತಾ ಕರ್ತವ್ಯಕ್ಕೆ ಹಿಂದಿರುಗಿ ಚಕಿತಗೊಳಿಸಿದ್ದಾರೆ.
ಕಳೆದ ವರ್ಷ ಫೆಬ್ರವರಿ 14ರಂದು ಉತ್ತರ ಕಾಶ್ಮೀರದ ಬಂಡಿಪೆÇೀರಾದ ಹಜಿನ್ ಪ್ರದೇಶದಲ್ಲಿ ಉಗ್ರರೊಂದಿಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಚೇತಾ ತೀವ್ರ ಗಾಯಗೊಂಡಿದ್ದರು. 45ನೇ ಬೆಟಾಲಿಯನ್‍ನ ಕಮ್ಯಾಂಡೆಂಟ್ ಆಗಿದ್ದ ಅವರಿಗೆ ಗುಂಡೇಟುಗಳಾಗಿದ್ದರೂ ಲೆಕ್ಕಿಸದೇ ಮುನ್ನುಗ್ಗಿ ಭಯೋತ್ಪಾದಕರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಇವರ ಶೌರ್ಯ ಮತ್ತು ಸಾಹಸದಿಂದ ಉಗ್ರರ ವಿಧ್ವಂಸಕ ಕೃತ್ಯ ವಿಫಲವಾಗಿತ್ತು.
9 ಗುಂಡುಗಳು ಇವರ ದೇಹವನ್ನು ಹೊಕ್ಕಿದ್ದವು. ತಕ್ಷಣ ಅವರನ್ನು ಶ್ರೀನಗರ ಸೇನಾ ನೆಲೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಡೆಸಿ ದೆಹಲಿಯ ಎಐಐಎಂಎಸ್ ಟ್ರೌಮ ಸೆಂಟರ್‍ಗೆ ಹೆಲಿಕಾಪ್ಟರ್‍ನಲ್ಲಿ ಕರೆತಂದು ಹೆಚ್ಚಿನ ಚಿಕಿತ್ಸೆ ನೀಡಲಾಗಿತ್ತು. ಚೀತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದರು. ಇವರ ಶೌರ್ಯವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಹ ಗುಣಗಾನ ಮಾಡಿದ್ದರು.
ಸಾವಿನ ದವಡೆಗೆ ಸಿಲುಕಿ ಅಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದ ಇವರ ಶೌರ್ಯಕ್ಕಾಗಿ ಕಳೆದ ವರ್ಷ ಕೀರ್ತಿ ಚಕ್ರ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.
ಈಗ ಚೇತರಿಸಿಕೊಂಡಿರುವ ಚೀತಾ ದೆಹಲಿಯ ಸಿಆರ್‍ಪಿಎಫ್ ಕೇಂದ್ರ ಕಚೇರಿಯಲ್ಲಿ ಕಮ್ಯಾಂಡೆಂಟ್ ಆಗಿ ಸಕ್ರಿಯ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ