ಮಂಡ್ಯ,ಮಾ.20-ಬೆಂಗಳೂರು ಎಸಿಬಿ ಎಸ್ಪಿಯಾಗಿ ವರ್ಗಾವಣೆಯಾಗಿದ್ದ ಮಂಡ್ಯ ಎಸ್ಪಿ ರಾಧಿಕಾ ಅವರನ್ನು ಕೇವಲ 10 ದಿನಗಳಲ್ಲಿ ಮತ್ತೆ ಮಂಡ್ಯಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ರಾಜ್ಯ ಸರ್ಕಾರ ಕಳೆದ ಮಾ.9ರಂದು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ 19 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಈ ವೇಳೆ ಮಂಡ್ಯದ ಎಸ್ಪಿ ರಾಧಿಕಾ ಅವರನ್ನು ಬೆಂಗಳೂರು ಎಸಿಬಿ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಅಲ್ಲದೆ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಗೀರೀಶ್ ಅವರನ್ನು ವರ್ಗಾವಣೆ ಮಾಡಿತ್ತು.
ಇದೀಗ ಕೆಲವು ಮಾರ್ಪಾಡು ಮಾಡಿ ಸರ್ಕಾರ ರಾಧಿಕಾ ಅವರನ್ನು ಪುನಃ ಮಂಡ್ಯ ಎಸ್ಪಿಯಾಗಿ ವರ್ಗಾವಣೆ ಮಾಡಿದೆ.