ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.23 ರಿಂದ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 72 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಕರ್ನಾಟಕ ಪ್ರೌಢಶಿಕ್ಷಣ ಪರೀP್ಷÁ ಮಂಡಳಿಯಿಂದ ಬಿಗಿ ಬಂದೋಬಸ್ತ್‍

ಕೋಲಾರ,ಮಾ.20- ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.23 ರಿಂದ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 72 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಕರ್ನಾಟಕ ಪ್ರೌಢಶಿಕ್ಷಣ ಪರೀP್ಷÁ ಮಂಡಳಿಯಿಂದ ಬಿಗಿ ಬಂದೋಬಸ್ತ್‍ನಲ್ಲಿ ಪ್ರಶ್ನೆಪತ್ರಿಕೆಗಳನ್ನು ರವಾನಿಸಲಾಗಿದೆ.

ನಗರದ ಡಿಡಿಪಿಐ ಕಚೇರಿ ಆವರಣದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಕಾಂಪೌಂಡ್‍ಗೇಟ್‍ಗೆ ಬೀಗ ಹಾಕಿ ಎಚ್ಚರಿಕೆ ವಹಿಸಲಾಗಿದೆ.
ಡಿಡಿಪಿಐ ಸ್ವಾಮಿ ನೇತೃತ್ವದಲ್ಲಿ ಇಲಾಖೆಯ ಅಧಿಕಾರಿಗಳು ಬೆಂಗಳೂರಿನಿಂದ ಬೀಗಮುದ್ರೆಯೊಂದಿಗೆ ಆಗಮಿಸಿದ್ದ ವಾಹನದಿಂದ ಪ್ರಶ್ನೆಪತ್ರಿಕೆಗಳ ಬಂಡಲ್‍ಗಳನ್ನು ಪಡೆದುಕೊಂಡು ಸ್ಥಳದಲ್ಲೇ ಪರಿಶೀಲನೆ ನಡೆಸುತ್ತಿದ್ದುದು ಕಂಡು ಬಂತು.

ಆಯಾ ತಾಲ್ಲೂಕುವಾರು ಪ್ರಶ್ನೆಪತ್ರಿಕೆ ಬಂಡಲ್‍ಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿದ ನಂತರ ಅಧಿಕಾರಿಗಳು ಪರಿಶೀಲನೆ ನಡೆಸಿ ಬಂಡಲ್ ಮುದ್ರೆಗೆ ಯಾವುದೇ ಲೋಪವಾಗಿಲ್ಲ ಎಂಬುದನ್ನು ದೃಢಪಡಿಸಿಕೊಂಡರು.

ಶಸ್ತ್ರಸಜ್ಜಿತ ಪೆÇಲೀಸ್ ಬಂದೋಬಸ್ತ್‍ನಲ್ಲಿ ಆಯಾ ತಾಲ್ಲೂಕುವಾರು ಪ್ರಶ್ನೆಪತ್ರಿಕೆಗಳನ್ನು ಬೀಗ ಮುದ್ರೆ ಹಾಕಿದ ಪೆಟ್ಟಿಗೆಗಳಲ್ಲಿ ತುಂಬಿ ಪ್ರತ್ಯೇಕ ವಾಹನದಲ್ಲಿ ಆ ವ್ಯಾಪ್ತಿಯ ಕ್ಷೇತ್ರಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಕಳುಹಿಸಿಕೊಡುವ ಕಾರ್ಯವನ್ನು ಪರೀP್ಷÁ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ನಡೆಸಿದರು.
ಪ್ರಶ್ನೆಪತ್ರಿಕೆ ಸೋರಿಕೆಗೆ ಅವಕಾಶವಿಲ್ಲದಂತೆ ಕಟ್ಟೆಚ್ಚರ ವಹಿಸಿರುವ ಇಲಾಖೆ ಅಧಿಕಾರಿಗಳು, ಪ್ರಶ್ನೆಪತ್ರಿಕೆ ಬಂಡಲ್‍ಗಳನ್ನು ತುಂಬಿದ ವಾಹನಗಳು ಆಯಾ ತಾಲ್ಲೂಕು ಮಾರ್ಗಾಧಿಕಾರಿಗಳ ನೇತೃತ್ವದಲ್ಲಿ ಹೋಗುವವರೆಗೂ ಕಚೇರಿ ಕಾಂಪೌಂಡ್ ಒಳಕ್ಕೆ ಸಾರ್ವಜನಿಕರಿಗೆ ನಿಷೇಧ ಹಾಕಿದ್ದುದು ಕಂಡು ಬಂತು.

ತಾಲ್ಲೂಕು ಮಾರ್ಗಾಧಿಕಾರಿಗಳ ನೇತೃತ್ವದಲ್ಲಿ ಶಸ್ತ್ರಸಜ್ಜಿತ ಪೆÇಲೀಸರ ರಕ್ಷಣೆಯಲ್ಲಿ ಹೊರಟ ಪ್ರಶ್ನೆಪತ್ರಿಕೆ ಬಂಡಲ್‍ಗಳನ್ನು ಆಯಾ ತಾಲ್ಲೂಕು ಖಜಾನೆಗಳಲ್ಲಿ ಠೇವಣಿ ಮಾಡಿ ಸಂರಕ್ಷಿಸಿಡಲು ಡಿಡಿಪಿಐ ಸೂಚನೆ ನೀಡಿದರು.

ಕೋಲಾರ ತಾಲ್ಲೂಕಿನಾದ್ಯಂತ ಇರುವ ಒಟ್ಟು 17 ಪರೀP್ಷÁ ಕೇಂದ್ರಗಳಿಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆಗಳನ್ನು ಕೋಲಾರದ ಜಿಲ್ಲಾ ಖಜಾನೆಯಲ್ಲಿ ಬಂಗಾರಪೇಟೆಯ 11 ಕೇಂದ್ರಗಳ ಪ್ರಶ್ನೆಪತ್ರಿಕೆಗಳು, ಮಾಲೂರಿನ 11 ಕೇಂದ್ರಗಳು, ಮುಳಬಾಗಿಲಿನ 11, ಕೆಜಿಎಫ್‍ನ 10, ಶ್ರೀನಿವಾಸಪುರದ 12 ಕ್ಷೇತ್ರಗಳ ಪ್ರಶ್ನೆಪತ್ರಿಕೆಗಳನ್ನು ಆಯಾ ತಾಲ್ಲೂಕು ಖಜಾನೆಗಳಿಗೆ ಸಂರಕ್ಷಿಸಿಡಲು ಪೆÇಲೀಸ್ ಬಂದೋಬಸ್ತ್‍ನಲ್ಲಿ ಸಾಗಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ