ಶ್ರೀ ಶನಿಮಹಾತ್ಮ ದೇವಾಲಯದಲ್ಲಿ ರಾತ್ರಿ ಚೋರರು ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿ ಪರಾರಿ:

ಮಂಡ್ಯ ,ಮಾ.20-ಮದ್ದೂರು ಪಟ್ಟಣದ ಶನಿಮಹಾತ್ಮ ದೇವಾಲಯದ ಬಾಗಿಲನ್ನು ಹಾರೆಯಿಂದ ಮೀಟಿ ಒಳನುಗ್ಗಿದ ಕಳ್ಳರು ಹುಂಡಿಯಲ್ಲಿದ್ದ ಸುಮಾರು 60 ಸಾವಿರ ರೂ. ದೋಚಿರುವ ಘಟನೆ ಮದ್ದೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮದ್ದೂರಿನ ಚೆನ್ನೇಗೌಡನದೊಡ್ಡಿಯಲ್ಲಿರುವ ಶ್ರೀ ಶನಿಮಹಾತ್ಮ ದೇವಾಲಯದಲ್ಲಿ ರಾತ್ರಿ ಚೋರರು ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ದೇವಾಲಯದ ಅರ್ಚಕರು ಬಂದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.  ವಿಷಯ ತಿಳಿದ ಮದ್ದೂರು ಪಟ್ಟಣ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ