ತೆಂಕ ಎರ್ನಮಲ, ಮಾ.20-ನಾವು ಪ್ರೀತಿಯಿಂದ ದೇಶ ಕಟ್ಟುವ ಪ್ರಯತ್ನ ಮಾಡಿದರೆ, ಆರ್ಎಸ್ಎಸ್ ದ್ವೇಷದಿಂದ ದೇಶ ಒಡೆಯುವ ಕೆಲಸ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಇಂದಿಲ್ಲಿ ಹೇಳಿದರು.
ಜನಾಶೀರ್ವಾದ ಯಾತ್ರೆಗೆ ಮಂಗಳೂರಿಗೆ ಆಗಮಿಸಿದ್ದ ಅವರು, ಎರ್ನಮಲದಲ್ಲಿ ಸೇವಾದಳದ ರಾಜೀವ್ಗಾಂಧಿ ರಾಜಕೀಯ ತರಬೇತಿ ಕೇಂದ್ರದ ನವೀಕೃತ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಆರ್ಎಸ್ಎಸ್ಗೂ ನಮಗೂ ತುಂಬಾ ವ್ಯತ್ಯಾಸವಿದೆ. ನಾವು ಪ್ರೀತಿಯಿಂದ ದೇಶ ಕಟ್ಟುವ ಕೆಲಸ ಮಾಡುತ್ತೇವೆ. ಅವರು ದ್ವೇಷದಿಂದ ಅದನ್ನು ಒಡೆಯುವ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ತತ್ವಸಿದ್ಧಾಂತಗಳಡಿಯಲ್ಲಿ ನಡೆಯುತ್ತದೆ. ದೇಶದಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುತ್ತಿದ್ದೇವೆ. ಆದರೆ ಬಿಜೆಪಿ ಎಲ್ಲದರಲ್ಲೂ ಏಕರೂಪ ತರಬೇಕು ಎಂದು ಹಂಬಲಿಸುತ್ತಿದೆ.
ದೇಶಾದ್ಯಂತ ಬಹುಸಂಸ್ಕøತಿ, ಬಹು ಆಹಾರ ಪದ್ಧತಿ ಇದೆ. ಆದರೆ ಇವೆಲ್ಲವೂ ಒಂದೇ ಆಗಬೇಕು ಎಂಬುದು ಅವರ ನಿಲುವಾಗಿದೆ ಎಂದು ರಾಹುಲ್ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಬದಲಾಗಬೇಕು. ನಾವು ಹೆದರಿಸಿದರೆ ಸುಮ್ಮನೆ ನಿಲ್ಲಬಾರದು. ಭಯಕ್ಕೆ ಎದುರಾಗಿ ನಿಲ್ಲಬೇಕು. ಆರ್ಎಸ್ಎಸ್ ಮತ್ತು ಬಿಜೆಪಿ ವಂಚನೆ ಮೂಲಕ ಭಯವನ್ನು ಹೆಚ್ಚಿಸುತ್ತದೆ. ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡರೆ ಕಠಿಣ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.