ಟಿ.ನರಸೀಪುರ, ಮಾ.19- ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪುಣ್ಯ ಸ್ನಾನ ಮಾಡಲು ಪಟ್ಟಣದ ತ್ರಿವೇಣಿ ಸಂಗಮದ ನದಿಗೆ ಇಳಿದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ತಾಲ್ಲೂಕಿನ ಬನ್ನಹಳ್ಳಿಹುಂಡಿ ಗ್ರಾಮದ ಪ್ರಮೋದ್ (12) ಹಾಗೂ ತೇಜೇಂದ್ರಪ್ರಸಾದ್ (17) ಮೃತ ದುರ್ದೈವಿಗಳು.
ಹಬ್ಬದ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆÉಗೆ ತಿರುಮಕೂಡಲಿನ ತ್ರಿವೇಣಿ ಸಂಗಮದ ನದಿಗೆ ಸ್ನಾನ ಮಾಡಲು ಇಳಿದ ಯುವಕರು ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಯುವಕರು ನೀರಿನಲ್ಲಿ ಮುಳುಗುವುದನ್ನು ಕಂಡ ಅಕ್ಕ -ಪಕ್ಕದವರು ಯುವಕರನ್ನು ರಕ್ಷಿಸಲು ಮುಂದಾದರೂ ಅಷ್ಟರಲ್ಲಾಗಲೇ ನದಿಯಲ್ಲಿ ಮುಳುಗಿದ್ದ ಯುವಕರ ಪೈಕಿ ಪ್ರಮೋದ್ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದರೆ, ತೀವ್ರ ಅಸ್ವಸ್ಥಗೊಂಡಿದ್ದ ತೇಜೇಂದ್ರಪ್ರಸಾದ್ ನನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತನೂ ಮೃತಪಟ್ಟಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಟಿ.ನರಸೀಪುರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ವಾರಸುದಾರರಿಗೆ ನೀಡಿದ್ದಾರೆ.