
ನವದೆಹಲಿ, ಮಾ.19- ಇಂದು ಭಾರತ ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಸಾಮೂಹಿಕ ನಿರುದ್ಯೋಗ ಕೂಡ ಒಂದು. ಆದರೆ ಅದನ್ನು ಪ್ರಧಾನಿ ನಿರಾಕರಿಸುತ್ತಲೇ ಬರುತ್ತಿದ್ದಾರೆ. ನಮಗೆ ಇಂಥ ಪ್ರಧಾನಿ ಸಿಕ್ಕಿರುವುದು ದುರದೃಷ್ಟಕರ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ದೇಶದಲ್ಲಿ ಉತ್ಪಾದನೆ ವಲಯವನ್ನು ಬೆಳೆಸದಿದ್ದರೆ ಸಾಮೂಹಿಕ ನಿರುದ್ಯೋಗವುಂಟಾಗುವ ಸಾಧ್ಯತೆಯಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಪೌಲ್ ಕ್ರುಗ್ಮಾನ್ ನೀಡಿರುವ ಹೇಳಿಕೆಯನ್ನು ಗುರಿಯಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಾಹುಲ್ ಟ್ವೀಟ್ ಮಾಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ನಾವು ಹೇಳುತ್ತಾ ಬಂದಿರುವುದನ್ನು ಆರ್ಥಿಕ ತಜ್ಞ ಪೌಲ್ ಕ್ರುಗ್ಮನ್ ದೃಢಪಡಿಸಿದ್ದಾರೆ. ಮೋದಿಯವರ ಅಚ್ಚೆ ದಿನ್ ಸಾರ್ವಜನಿಕ ಪ್ರಚಾರ ಸೋಲು ಕಾಣುತ್ತಿದೆ ಎಂಬ ಆತಂಕ ಪ್ರಧಾನಿಗೆ ಉಂಟಾಗಿದೆ ಎಂದು ಟೀಕಿಸಿದ್ದಾರೆ.