ಚೆನ್ನೈ,ಮಾ.19- ಮಗನೇ ತನ್ನ ತಾಯಿಯನ್ನು ಕೊಲೆ ಮಾಡಿ ಆಕೆಯ ರುಂಡವನ್ನು ಹಿಡಿದು ಪೆÇಲೀಸ್ ಠಾಣೆಗೆ ಬಂದು ಶರಣಾಗಿರುವ ಭೀಕರ ಘಟನೆ ತಮಿಳುನಾಡಿನ ಪುದುಕೊಟ್ಟೈ ಎಂಬಲ್ಲಿ ನಡೆದಿದೆ.
ಆನಂದ್(30) ಎಂಬಾತನೇ ತನ್ನ ಹೆತ್ತಮ್ಮನನ್ನು ಕೊಲೆ ಮಾಡಿರುವ ಯುವಕ.
ಈತ ಆಸ್ತಿ ವಿಚಾರಕ್ಕೆ ತಾಯಿ ರಾಣಿ ಅವರೊಂದಿಗೆ ಆಗಾಗ ಜಗಳವಾಡುತ್ತಿದ್ದ. ನಿನ್ನೆ ಬೆಳಗ್ಗೆ ಕೂಡ ಇಬ್ಬರ ನಡುವೆ ಜಗಳ ನಡೆದಿದ್ದು, ಕೋಪದ ಭರದಲ್ಲಿ ಹರಿತವಾದ ಆಯುಧದಿಂದ ಆಕೆಯ ಶಿರಚ್ಛೇದ ಮಾಡಿದ್ದಾನೆ. ಬಳಿಕೆ ರುಂಡವನ್ನು ಹಿಡಿದುಕೊಂಡು ಕರಂಬಾಕುಡಿ ಪೆÇಲೀಸ್ ಠಾಣೆಗೆ ಶರಣಾಗಿದ್ದಾನೆ. ಆರೋಪಿ ಆನಂದ್ನನ್ನು ವಶಕ್ಕೆ ಪಡೆದಿರೋ ಪೆÇಲೀಸರು ವಿಚಾರಣೆ ನಡೆಸುತ್ತಿದ್ದಾರೆ.