ಬೆಂಗಳೂರು, ಮಾ.19- ಕರ್ತವ್ಯನಿರತ ಇಬ್ಬರು ಕಾನ್ಸ್ಟೆಬಲ್ಗಳ ಮೇಲೆ ಹಲ್ಲೆ ನಡೆಸಿದ ನಾಲ್ವರನ್ನು ವರ್ತೂರು ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಸಿದ್ದಾಪುರ ಗ್ರಾಮದ ನಿವಾಸಿಗಳಾದ ಕುಮಾರ, ಸಂದೀಪ, ಮೂರ್ತಿ ಮತ್ತು ಮುರಳಿ ಮೋಹನ ಬಂಧಿತ ಆರೋಪಿಗಳು.
ಯುಗಾದಿ ಹಬ್ಬದ ಸಂದರ್ಭದಲ್ಲಿ ನಿನ್ನೆ ಮಧ್ಯಾಹ್ನ 1.30ರ ವೇಳೆಯಲ್ಲಿ ಸಿದ್ದಾಪುರ ಸರ್ಕಾರಿ ಶಾಲೆ ಬಳಿ 25 ರಿಂದ 30 ಮಂದಿ ಸೇರಿಕೊಂಡು ಜೂಜಾಡುತ್ತಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ವೈಟ್ಫೀಲ್ಡ್ ಠಾಣೆ ಕಾನ್ಸ್ಟೆಬಲ್ಗಳಾದ ಬಸಪ್ಪ ಗಾಣಗೇರ ಮತ್ತು ಶರಣ ಬಸಪ್ಪ ಎಂಬುವರು ಬೈಕ್ನಲ್ಲಿ ಸ್ಥಳಕ್ಕೆ ತೆರಳಿದ್ದಾರೆ.
ಈ ವೇಳೆ ಗುಂಪನ್ನು ಚದುರಿಸಲು ಮುಂದಾಗುತ್ತಿದ್ದಂತೆ ಜೂಜಾಡುತ್ತಿದ್ದವರು ಇವರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಈ ಬಗ್ಗೆ ಕಾನ್ಸ್ಟೆಬಲ್ಗಳು ವರ್ತೂರು ಪೆÇಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.