ನವದೆಹಲಿ, ಮಾ.19- ಬಿಜೆಪಿಯಲ್ಲಿ ಕೆಲವರ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ , ಮೈಮರೆತರೆ ಪರಿಣಾಮ ಎದುರಿಸಬೇಕಾದೀತು ಎಂದು ಹೇಳುವ ಮೂಲಕ ಕೇಂದ್ರ ಆಹಾರ ಮತ್ತು ಸಾರ್ವಜನಿಕ ಪೂರೈಕೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಬಿಜೆಪಿ ವಿರುದ್ಧ ಬಂಡಾಯದ ಕಿಡಿ ಹೊತ್ತಿಸುವ ಸೂಚನೆ ನೀಡಿದ್ದಾರೆ.
ಅಲ್ಪಸಂಖ್ಯಾತರು ಮತ್ತು ದಲಿತರನ್ನು ಬಿಜೆಪಿ ನೋಡುವ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು. ಬಿಜೆಪಿಯಲ್ಲಿ ಯಾರೂ ಜಾತ್ಯತೀತ ಮುಖಂಡರಿಲ್ಲವೇ? ಬಿಜೆಪಿಯಲ್ಲಿ ಸುಶೀಲ್ ಮೋದಿ, ರಾಮ್ ಕೃಪಾಲ್ ಯಾದವ್ರಂಥ ನಾಯಕರಿದ್ದರೂ, ಅಂಥವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಉಳಿದವರ ಧ್ವನಿ ಮಾತ್ರವೇ ಗಮನಕ್ಕೆ ಬರುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.