ಶ್ರೀನಗರ:ಮಾ-19: ಕಾಶ್ಮೀರಿ ಪ್ರತ್ಯೇಕತಾವಾದಿ ಮುಖಂಡ ಸಯ್ಯದ್ ಅಲಿ ಷಾ ಗಿಲಾನಿ ಅವರು ತೆಹ್ರಿಕ್–ಈ–ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಯ್ಯದ್ ಅಲಿ ಷಾ ಗಿಲಾನಿ ರಾಜೀನಾಮೆಯಿಂದ ತೆರವುಗೊಂಡ ಸ್ಥಾನಕ್ಕೆ ಹುರಿಯತ್ ಸಂಘಟನೆಯ ಹಿರಿಯ ನಾಯಕ ಮೊಹಮ್ಮದ್ ಅಶ್ರಫ್ ಸೆಹ್ರಾಯ್ ಅವರನ್ನು ನೇಮಕ ಮಾಡಲಾಗಿದೆ.
ಈ ಬಗ್ಗೆ ಶ್ರೀನಗರದಲ್ಲಿನ ಕಚೇರಿಯಲ್ಲಿ ಸಭೆ ನಡೆಸಿದ ಗಿಲಾನಿ ಅವರು, ‘ಹುರಿಯತ್ ಸಂಘಟನೆಯ ಹಿರಿಯ ನಾಯಕ ಮೊಹಮ್ಮದ್ ಅಶ್ರಫ್ ಸೆಹ್ರಾಯ್ ಅವರು ತೆಹ್ರಿಕ್–ಈ–ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ’ ಎಂದು ಘೋಷಿಸಿದ್ದಾರೆ.
ಗಿಲಾನಿ ಅವರು ಜಮ್ಮು ಕಾಶ್ಮೀರದ ಸಪೋರೆ ವಲಯದಲ್ಲಿ ಮೂರು ಬಾರಿ ಶಾಸಕರಾಗಿದ್ದರು.