ಜೈಪುರ್, ಮಾ.19-ಶಾಂತಿ, ಏಕತೆ ಮತ್ತು ಸೌಹಾರ್ದತೆ ಭಾರತೀಯ ತತ್ತ್ವಶಾಸ್ತ್ರದ ಪ್ರಮುಖ ಅಂಗಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂದೇಶ ಸಾರಿದ್ದಾರೆ
ಮರುಭೂಮಿ ರಾಜ್ಯ ರಾಜಸ್ತಾನ ರಾಜಧಾನಿ ಜೈಪುರ್‍ದ ಅಜ್ಮೀರ್ ಶರೀಫ್‍ನಲ್ಲಿರುವ ಸೂಫಿ ಸಂತ ಹಜರತ್ ಖ್ವಾಜಾ ಮೊಹ್ನಿದ್ದೀನ್ ಚಿಸ್ತಿ ದರ್ಗಾದಲ್ಲಿ ಇಂದು ಪ್ರಧಾನಿ ಮೋದಿ ಪರವಾಗಿ ಪವಿತ್ರ ಚಾದರ್‍ನನ್ನು ಸಲ್ಲಿಸಲಾಯಿತು.
ಮೋದಿ ಅವರ ಪರವಾಗಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಮೋದಿ ಅವರು ಕಳುಹಿಸಿರುವ ಸಂದೇಶವನ್ನು ಓದಿದರು. 806ನೇ ವಾರ್ಷಿಕ ಉರುಸ್ ಪ್ರಯುಕ್ತ ಸೂಫಿ ಸಂತರು ಮತ್ತು ಖ್ವಾಜಾ ಮೊಹ್ನಿದ್ದೀನ್ ಚಿಸ್ತಿ ಅವರ ಸೇವೆಗಳನ್ನು ತಮ್ಮ ಸಂದೇಶದಲ್ಲಿ ಗುಣಗಾನ ಮಾಡಿರುವ ಮೋದಿ, ಶಾಂತಿ, ಏಕತೆ ಮತ್ತು ಸೌಹಾರ್ದತೆ ಭಾರತೀಯ ತತ್ತ್ವಶಾಸ್ತ್ರದ ತಿರುಳಾಗಿದೆ ಎಂದಿದ್ದಾರೆ.