ಕುಂಠಿ (ಜಾರ್ಖಂಡ್), ಮಾ.19- ಅಕ್ರಮ ಅಫೀಮು ದಂಧೆ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಜಾರ್ಖಂಡ್ ಪೆÇಲೀಸರು ಕುಂಠಿ ಜಿಲ್ಲೆಯಲ್ಲಿ 2,500 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಬೆಳೆಯಲಾಗಿದ್ದ 25 ಕೋಟಿ ರೂ. ಮೌಲ್ಯದ ಗಸಗಸೆ ಗಿಡವನ್ನು ನಾಶಪಡಿಸಿದ್ದಾರೆ.
ಕಳೆದ ಎರಡು ವಾರಗಳಿಂದ ಇದರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ್ದು ಒಟ್ಟು 25 ಕೋಟಿ ರೂ. ಮೌಲ್ಯದ ಅಕ್ರಮ ಗಸಗಸೆ ಬೆಳೆಯನ್ನು ನಾಶಪಡಿಸಲಾಗಿದೆ ಎಂದು ಪೆÇಲೀಸ್ ವರಿಷ್ಠಾಧಿಕಾರಿ ಅಶ್ವಿನ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.