ಸರ್ಕಾರಕ್ಕಿಂತ ಅಧಿಕಾರಿಗಳು ದೊಡ್ಡವರಲ್ಲ ವರ್ಗಾವಣೆ ಮಾಡಿದರೆ ಅಧಿಕಾರಿಗಳು ಹೋಗಬೇಕು : ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ

ಕೊಪ್ಪಳ, ಮಾ.19-ಸರ್ಕಾರಕ್ಕಿಂತ ಅಧಿಕಾರಿಗಳು ದೊಡ್ಡವರಲ್ಲ. ಸರ್ಕಾರಕ್ಕೆ ವರ್ಗಾವಣೆ ಮಾಡುವ ಅಧಿಕಾರವಿದೆ. ವರ್ಗಾವಣೆ ಮಾಡಿದರೆ ಅಧಿಕಾರಿಗಳು ಹೋಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ ಐಪಿಎಸ್, ಐಎಎಸ್ ಅಧಿಕಾರಿಗಳ ವರ್ಗಾವಣೆ ಸಮರ್ಥಿಸಿಕೊಂಡಿದ್ದಾರೆ.

ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳೇನು ಮೇಲಿಂದ ಇಳಿದು ಬಂದವರಲ್ಲ. ಸುಮ್ಮನೆ ಅವರನ್ನು ಹೀರೋ ಮಾಡುತ್ತಿದ್ದೀರಿ. ಸರ್ಕಾರಕ್ಕಿಂತ ಅವರೇನೂ ದೊಡ್ಡವರೇ ಎಂದು ಪ್ರಶ್ನಿಸಿದರು.

ಸರ್ಕಾರ 9 ತಿಂಗಳು ಅಥವಾ 9 ದಿನಗಳಲ್ಲಿಯೇ ವರ್ಗಾವಣೆ ಮಾಡಿದರೆ ಅಧಿಕಾರಿಗಳು ಹೋಗಲೇಬೇಕು. ವರ್ಗಾವಣೆ ಅಧಿಕಾರ ಸರ್ಕಾರಕ್ಕಿದೆ. ಇದರ ಬಗ್ಗೆ ಅಧಿಕಾರಿಗಳಿಗೆ ಅಸಮಾಧಾನವಿದ್ದರೆ ಅವರು ನ್ಯಾಯಾಲಯದ ಮೊರೆ ಹೋಗಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು.

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಯಲಬುರಗ ಕ್ಷೇತ್ರದಲ್ಲಿ ಜಾತಿ ರಾಜಕಾರಣ ನಡೆಯುವುದಿಲ್ಲ. ಮತದಾರರು ಬುದ್ಧಿವಂತರಾಗಿದ್ದು, ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ.


ಈ ಸಂದರ್ಭದಲ್ಲಿ ಮುಖಂಡರಾದ ಹನುಮೇಶ ಡ್ಯಾಗಿ, ಶರಣೇಗೌಡ ಮಾಲಿ ಪಾಟೀಲ, ರಮೇಶ ಪಾಟೀಲ ಕೂಕನಪಲ್ಲಿ, ಎಫ್.ರಾಘು, ಪರಮೇಶ್ ಬಡಿಗೇರ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ