ಬೆಂಗಳೂರು, ಮಾ.19- ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮುಂಬರುವ ಮಾ.26ರಂದು ಮೇಲುಕೋಟೆಯಲ್ಲಿ ನಡೆಯಲಿರುವ ಶ್ರೀ ಚೆಲುವನಾರಾಯಣ ಸ್ವಾಮಿ ವೈರಮುಡಿ ಉತ್ಸವಕ್ಕೆ ಭಕ್ತಾದಿಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.
ಬೆಂಗಳೂರಿನಿಂದ ಮೇಲುಕೋಟೆಗೆ ಹೋಗಿ ಬರಲು ಎಸಿ ಡೀಲಕ್ಸ್ ವಾಹನಗಳ ಸೌಲಭ್ಯವನ್ನು ಕಲ್ಪಿಸುತ್ತಿದೆ. ಇದು ಒಂದು ದಿನದ ಪ್ರವಾಸವಾಗಿದ್ದು , ಮುಂಗಡ ಬುಕಿಂಗ್ ಕೂಡ ನಿಗಮ ಕೌಂಟರ್‍ಗಳನ್ನು ತೆರೆದಿದೆ. ಮತ್ತು ಆನ್‍ಲೈನ್‍ನಲ್ಲೂ ಈ ಸೇವೆಯನ್ನು ಪಡೆಯಲು ಕಾಯ್ದಿರಿಸಬಹುದಾಗಿದೆ.
ಇದಲ್ಲದೆ ಯಶವಂತಪುರದಲ್ಲಿರುವ ಪ್ರಧಾನ ಬುಕಿಂಗ್ ಕೇಂದ್ರದಲ್ಲಿ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದ ಕೌಂಟರ್‍ಗಳಲ್ಲಿ ಸಂಪರ್ಕಿಸಬಹುದು. ಅಲ್ಲದೆ ನಿಗಮದ ಅಧಿಕೃತ ಏಜೆಂಟರ ಮುಖಾಂತರವೂ ಬುಕಿಂಗ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080- 4334 4334/35 ಅಥವಾ ಮೊಬೈಲ್ 8970650070/8970650075 ಸಂಪರ್ಕಿಸಲು ಕೋರಲಾಗಿದೆ.