ಬೆಂಗಳೂರು,ಮಾ.19-ಲಿಂಗಾಯಿತರ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನಮ್ಮ ಸಚಿವ ಸಹೋದ್ಯೋಗಿಗಳಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೂ ಎಲ್ಲವೂ ಸರಿ ಹೋಗಲಿದೆ ಎಂಬ ವಿಶ್ವಾಸವನ್ನು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ವ್ಯಕ್ತಪಡಿಸಿದರು.
ಸಚಿವ ಸಂಪುಟದ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಚಿವ ಸಹೋದ್ಯೋಗಿಗಳಲ್ಲಿ ತಾತ್ವಿಕ ಭಿನ್ನಾಭಿಪ್ರಾಯವಿದ್ದರೂ ಲಿಂಗಾಯಿತ ವಿವಾದ ಸೌರ್ಹಾದತೆಯಿಂದ ಬಗೆಹರಿಯಲಿದೆ ಎಂದರು.
ಪಾಂಚಾಚಾರ್ಯರು ಹೋರಾಟದ ಎಚ್ಚರಿಕೆ ನೀಡಿದ್ದರೂ ನಿನ್ನೆ ಯುಗಾದಿ ಹಬ್ಬದ ಸಂದರ್ಭದಲ್ಲಿ ಲಿಂಗಾಯಿತರ ಎಷ್ಟು ಮಂದಿ ಸ್ವಾಮೀಜಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾರೆ ಎಂಬುವುದನ್ನು ನೀವೇ ನೋಡಿದ್ದೀರಿಲ್ಲ ಎಂದು ಮಾಧ್ಯಮ ವರ್ಗದವರಿಗೆ ಮರುಪ್ರಶ್ನೆ ಹಾಕಿದರು.