ಮತದಾರರ ಪಟ್ಟಿಗೆ ಇನ್ನೂ ನಿಮ್ಮ ಹೆಸರು ಸೇರ್ಪಡೆಯಾಗಲಿಲ್ಲವೆ..? ಲೋಪದೋಷಗಳಿವೆಯೇ..?: ಇಲ್ಲಿದೆ ಮತ್ತೊಮ್ಮೆ ಕಾಲಾವಕಾಶ

 

ಬೆಂಗಳೂರು, ಮಾ.19- ಮತದಾರರ ಪಟ್ಟಿಗೆ ಇನ್ನೂ ನಿಮ್ಮ ಹೆಸರು ಸೇರ್ಪಡೆಯಾಗಲಿಲ್ಲವೆ..? ಲೋಪದೋಷಗಳಿವೆಯೇ..? ಅದನ್ನು ತಿದ್ದಿಕೊಳ್ಳಲು ಮತ್ತು ಸೇರ್ಪಡೆ ಮಾಡಿಕೊಳ್ಳಲು ಮತ್ತೊಮ್ಮೆ ಕಾಲಾವಕಾಶ ಕಲ್ಪಿಸಲಾಗಿದೆ.

ಚುನಾವಣಾ ಕಾರ್ಯಕ್ಕೆ ನಿಯುಕ್ತಿಗೊಂಡಿರುವ ಹಿರಿಯ ಪೆÇಲೀಸರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಈ ವಿಷಯ ತಿಳಿಸಿದ್ದಾರೆ.

ಈಗಾಗಲೇ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಿರುವ ಮತದಾರರು ತಮ್ಮ ಹೆಸರು ಸರಿಯಾಗಿ ನೋಂದಣಿ ಆಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಒಂದು ವೇಳೆ ತಾಂತ್ರಿಕ ದೋಷಗಳಿಂದ ಸೇರ್ಪಡೆಯಾಗದಿದ್ದಲ್ಲಿ ಮತ್ತೆ ಸೇರ್ಪಡೆ ಮತ್ತು ತಿದ್ದುಪಡಿಗೆ ಕಾಲಾವಕಾಶ ಕಲ್ಪಿಸಲಾಗಿದೆ ಎಂದರು.

ಮಸ್ಟರಿಂಗ್, ಡಿ ಮಸ್ಟರಿಂಗ್ ಪಾಯಿಂಟ್ ಮಾಡಲಾಗಿದ್ದು, ಮಹಾರಾಣಿ ಕಲಾ ಕಾಲೇಜು, ಜಯನಗರದ ಎಸ್‍ಎಸ್‍ಎಂಆರ್ ವಿಪಿಯು ಕಾಲೇಜು, ಮಹಾರಾಣಿ ವಿಜ್ಞಾನ ಕಾಲೇಜು, ಹೋಂ ಸೈನ್ಸ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಈ ಬಾರಿ ವಿವಿ ಪ್ಯಾಟ್ ಬಂದಿರುವುದರಿಂದ ಒಬ್ಬ ಅಧಿಕಾರಿ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. 807 ಆಕ್ಸಲರಿ ಪೆÇೀಲಿಂಗ್ ಸ್ಟೇಷನ್ ನಿರ್ಮಾಣ ಮಾಡಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ