ಇಂಡಿ ಮಾ 19: ಭೀಮಾತೀರದ ಹಂತಕರಲ್ಲೊಬ್ಬರಾದ ಮಹಾದೇವ ಸಾಹುಕಾರ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಗೆ ಇಂಡಿ ಮತಕ್ಷೇತ್ರದಿಂದ ಸ್ಪರ್ಧೆಗೆ ಮಹಾದೇವ ಸಹುಕಾರ ಪಕ್ಷೇತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಇಂಡಿ ತಾಲ್ಲೂಕಿನ ಕೇರೂರನಲ್ಲಿ ಘೋಷಿಸಿದ್ದಾರೆ.
ಇನ್ನು ಅಣ್ಣ ಪುತ್ರಪ್ಪ ಸಾಹುಕಾರ ಕಾಂಗ್ರೆಸ್ 2013 ರಲ್ಲಿ ಅಭ್ಯರ್ಥಿಯಾಗಿ ಟಿಕೆಟ್ ಕೇಳಿದ್ರು.ಆದ್ರೆ ಆಗ ಕಾಂಗ್ರೆಸ್ ನೀಡಲಿಲ್ಲ.ಆದ ಕಾರಣಕ್ಕೆ ಪಕ್ಷೇತ್ರ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕುತ್ತಿರುವುದಾಗಿ ಹೇಳಿದ್ದಾರೆ.
ನಮ್ಮ ಅಣ್ಣ ಪುತ್ರಪ್ಪ ಸಾಹುಕಾರ ಆಸೆ ಪೂರ್ಣಗೊಳಿಸಲು ಪಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದು, ಯಾವುದೆ ಒತ್ತಡ ಬಂದ್ರು ಹಿಂದೆ ಸರಿಯಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಇನ್ನು ಸುಖಸುಮ್ಮನೆ ನನ್ನ ಮೇಲೆ ಆರೋಪಗಳು ಕೇಳಿ ಬಂದಿವೆ ಹೊರೆತು ಯಾರಿಗಾದ್ರು ತೊಂದರೆ ಹಾಗೂ ಧಮ್ಕಿ ಹಾಕಿದ್ದ ಮಾಹಿತಿ ನೀಡಿದ್ರೆ ಕ್ಷೇತ್ರದಿಂದ ಕಣಕ್ಕೆ ಇಳಿಯುವುದಿಲ್ಲ ಎಂದು ಸವಾಲೆಸದಿದ್ದಾರೆ.