ತುಮಕೂರು, ಮಾ.19-ಜಿಲ್ಲೆಯಾದ್ಯಂತ ಯಾವುದೇ ಕಾರಣಕ್ಕೂ ಯುಗಾದಿ ದಿನ ಜೂಜಾಡವಾಡಬಾರದು ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದರೂ ಕೂಡ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾತ್ಸಂದ್ರ ಪೆÇಲೀಸ್ ಠಾಣೆಯಲ್ಲಿ 4 ಪ್ರಕರಣ, ಜಯನಗರದಲ್ಲಿ 4 ಪ್ರಕರಣ, ತಿಲಕ್ಪಾರ್ಕ್ ಠಾಣೆಯಲ್ಲಿ 6 ಪ್ರಕರಣ, ತುರುವೇಕೆರೆ ಠಾಣೆಯಲ್ಲಿ ಒಂದು, ಗೂಳೂರು ಠಾಣೆಯಲ್ಲಿ 4, ನಗರ ಠಾಣೆಯಲ್ಲಿ 2, ಸಿ.ಎಸ್.ಪುರ ಠಾಣೆಯಲ್ಲಿ 2, ಗುಬ್ಬಿಯಲ್ಲಿ 4, ಚೋಳೂರು ಠಾಣೆಯಲ್ಲಿ 3, ಕಳ್ಳಬೆಳ್ಳ ಠಾಣೆಯಲ್ಲಿ 4, ಪಟ್ಟನಾಯಕನಹಳ್ಳಿ ಠಾಣೆಯಲ್ಲಿ 3 ಪ್ರಕರಣ, ಕೊರಟಗೆರೆಯಲ್ಲಿ 3, ಕೋಳಾಲ 2, ತಿರುಮಣಿ 6, ಪಾವಗಡ 3, ವೈಎನ್ಎಸ್ ಕೋಟೆ 2, ತಿಪಟೂರು 4, ಚಿಕ್ಕನಾಯಕಹಳ್ಳಿ 2, ಹುಳಿಯಾರು 2, ಹಂದನಕೆರೆ 2, ಬಡವನಹಳ್ಳಿ ಠಾಣೆಯಲ್ಲ್ಲಿ 2 ಪ್ರಕರಣಗಳು ದಾಖಲಾಗಿವೆ.
ಚೇಳೂರು ಪೆÇಲೀಸ್ ಠಾಣೆ ವ್ಯಾಪ್ತಿಯ ಮಂಚಲದೊರೆ ಗ್ರಾಮದ ಬಳಿ ಜೂಜಾಟ ನಡೆಯುತ್ತಿದ್ದ ಬಗ್ಗೆ ಎಸ್ಪಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ರಾಘವೇಂದ್ರ, ಸಬ್ಇನ್ಸ್ಪೆಕ್ಟರ್ ಕಾಂತರಾಜು, ಸಿಬ್ಬಂದಿಗಳಾದ ಅಯೂಬ್ಜಾನ್, ಮಲ್ಲೇಶ್, ನಾಗರಾಜು ಅವರನ್ನೊಳಗೊಂಡ ತಂಡ ದಿಢೀರ್ ದಾಳಿ ನಡೆಸಿ, 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಬೈಕ್, ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ತುರುವೇಕೆರೆ ಪಟ್ಟಣದ ಕೆಇಬಿ ಆವರಣದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ಪೆÇಲೀಸರು 2.40 ಲಕ್ಷ ನಗದು, ದ್ವಿಚಕ್ರವಾಹನ, ಮೊಬೈಲ್ ವಶಪಡಿಸಿಕೊಂಡಿದ್ದಾರೆ.