ಮಾದಿಗ ಸಮುದಾಯಕ್ಕೆ ರಾಜಕೀಯ ಮತ್ತು ಆರ್ಥಿಕ ಶಕ್ತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮುದಾಯದ ಪರವಾಗಿ ಕೃತಜ್ಞತೆ

ಬೆಂಗಳೂರು,ಮಾ.19-ಮಾದಿಗ ಸಮುದಾಯಕ್ಕೆ ರಾಜಕೀಯ ಮತ್ತು ಆರ್ಥಿಕ ಶಕ್ತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮುದಾಯದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ವಿವಿಧ ಮುಖಂಡರು ತಿಳಿಸಿದ್ದಾರೆ.

ಅನೇಕ ಸೌಲಭ್ಯ ಹಾಗೂ ಸೌಕರ್ಯ ಕಲ್ಪಿಸುವ ಮೂಲಕ ನಮ್ಮ ಸಮುದಾಯಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಕಾರ ಮಾಡಿದ್ದಾರೆ. ಅದರಲ್ಲೂ ಕ್ರಾಂತಿಕಾರಿ ಕಾಯ್ದೆ ಎನಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪಯೋಜನೆಯ ಕಾಯ್ದೆ 2013 ಜಾರಿಗೊಳಿಸಲಾಗಿದೆ.

 

ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪಂಗಡದ ಆಯೋಗ, ಸಫಾಯಿ ಕರ್ಮಚಾರಿ ಆಯೋಗ, ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ, ಕೇಂದ್ರೀಯ ಪರಿಹಾರ ಸಮಿತಿ, ರಾಜ್ಯ ಆಹಾರ ಆಯೋಗ, ಮಾಹಿತಿ ಹಕ್ಕು ಆಯುಕ್ತರನ್ನಾಗಿ ಈ ಸಮುದಾಯದ ಮುಖಂಡರನ್ನೇ ಆಯ್ಕೆ ಮಾಡಿರುವ ಜೊತೆಗೆ ಮಂತ್ರಿ ಮಂಡಲದಲ್ಲಿ ಎಚ್.ಆಂಜನೇಯ ಅವರಿಗೆ ಸ್ಥಾನ, ಕೆ.ಎಚ್.ಮುನಿಯಪ್ಪ, ಬಿ.ಎನ್.ಚಂದ್ರಪ್ಪ , ಡಾ.ಎಲ್.ಹನುಂತಯ್ಯ ಅವರಿಗೆ ರಾಜಕೀಯ ಅವಕಾಶ ನೀಡಿ ಸಮುದಾಯಕ್ಕೆ ರಾಜಕೀಯ ಶಕ್ತಿ ತುಂಬಲಾಗಿದೆ. ಹಾಗಾಗಿ ಸಚಿವ ಸಂಪುಟ ಉಪಸಮಿತಿಯ ವರದಿ ಬರುವವರೆಗೂ ಮಾದಿಗ ದಂಡೋರ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ಚಳುವಳಿಗಾರರು ಚಳುವಳಿ ಸ್ಥಗಿತಗೊಳಿಸುವಂತೆ ಮುಖಂಡರು ಕೋರಿದ್ದಾರೆ.

ಸಚಿವ ಆರ್.ಬಿ.ತಿಮ್ಮಾಪುರ್, ರಾಜ್ಯ ಪರಿಶಿಷ್ಟ ಜಾತಿ, ಪಂಗಡದ ಆಯೋಗದ ಅಧ್ಯಕ್ಷ ಎ.ಮುನಿಯಪ್ಪ , ರಾಜ್ಯ ಸಫಾಯಿ ಕರ್ಮಚಾ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ಮಾರಪ್ಪ , ಶಾಸಕ ಕರಿಯಣ್ಣ , ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನ, ಮಾಜಿ ಸಚಿವ ಅಂಜನಮೂರ್ತಿ ಮತ್ತಿತರರು ಕೃತಜ್ಞತೆ ಸಲ್ಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ