
ರಾಯ್ಪುರ್, ಮಾ.19-ಛತ್ತೀಸ್ಗಢದಲ್ಲಿ ನಕ್ಸಲರ ಅಟ್ಟಹಾಸ ಮುಂದುವರಿದಿದೆ. ಬಿಜಾಪುರ್ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳವೊಂದರ ಮೇಲೆ ದಾಳಿ ನಡೆಸಿದ ಬಂಡುಕೋರರು ಗುತ್ತಿಗೆದಾರರೊಬ್ಬನನ್ನು ಕೊಂದು, ನಾಲ್ಕು ವಾಹನಗಳು ಮತ್ತು ಯಂತ್ರೋಪಕರಣಗಳಿಗೆ ಬೆಂಕಿ ಹಚ್ಚಿದ್ದಾರೆ.
ಬಿಜಾಪುರ್ ತುಮ್ನರ್ ಮತ್ತು ಕೋಯಿಟ್ಪಲ್ ಗ್ರಾಮಗಳ ನಡುವೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ಸ್ಥಳದ ಮೇಲೆ ಇಂದು ಬೆಳಗ್ಗೆ ದಾಳಿ ನಡೆಸಿದ ನಕ್ಸಲರು ಕಾರ್ಮಿಕರಿಗೆ ಬೆದರಿಸಿದರು. ನಂತರ ಅಲ್ಲಿದ್ದ ನಾಲ್ಕು ವಾಹನಗಳು ಮತ್ತು ಕಾಮಗಾರಿ ಯಂತ್ರೋಪಕರಣಗಳಿಗೆ ಬೆಂಕಿ ಹಚ್ಚಿದರು.
ಮತ್ತೊಂದು ಗುಂಪು ಗುತ್ತಿಗೆದಾರರೊಬ್ಬರನ್ನು ಅಪಹರಿಸಿ ನಂತರ ಅವರನ್ನು ಹತ್ಯೆ ಮಾಡಿದೆ.
ಮಾರ್ಚ್ 14ರಂದು ಸುಕ್ಮಾ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ಸ್ಥಳದ ಮೇಲೆ ದಾಳಿ ನಡೆಸಿದ್ದ ಮಾವೋವಾದಿಗಳು ಕೂಲಿ ಕಾರ್ಮಿಕನೊಬ್ಬನನ್ನು ಕೊಂದು ಪರಾರಿಯಾಗಿದ್ದರು.