ನವದೆಹಲಿ, ಮಾ.19- ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಎಂಎಲ್ಸಿ ಸ್ಥಾನವನ್ನು ಅನೂರ್ಜಿತಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲï) ನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನಿತೀಶ್ ಕುಮಾರ್ 2012ರಲ್ಲಿ ತನ್ನ ಮೇಲಿದ್ದ ಕ್ರಿಮಿನಲ್ ಮೊಕದ್ದಮೆ ಸಂಬಂಧ ವಾಸ್ತವಾಂಶವನ್ನು ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ. ಎಂದು ಮುಖ್ಯಮಂತ್ರಿಗಳು ನ್ಯಾಯಾಲಯಕ್ಕೆ ಮಾಹಿತಿ ನಿಡಿದ್ದಾರೆ. ಅವರ ಮಾಹಿತಿ ಆಧರಿಸಿ ಈ ಪಿಐಎಲ್ ನ್ನು ತಿರಸ್ಕರಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಹೇಳಿದೆ. ವಿಚಾರಣಾ ನ್ಯಾಯಾಲಯವು ಪ್ರಕರಣವನ್ನು ಪರಿಗಣಿಸಿದ ಬಳಿಕ ನಿತೀಶ್ ತಮ್ಮ ವಿರುದ್ಧದ ಆರೋಪದ ಸಂಬಂಧ ಸೂಕ್ತ ವಿವರಣೆ ನಿಡಬೇಕೆಂದು ಚುನಾವಣಾ ನಿಯಮಾವಳಿಯಲ್ಲಿದೆ. ಅವರು ಹಾಗೆಯೇ ಮಾಡಿದ್ದಾರೆ ನ್ಯಾಯಪೀಠ ಹೇಳಿದೆ.
ಪಾಟ್ನಾ ಹೈಕೋರ್ಟ್ ಈ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ ಎಂಡು ಮುಖ್ಯಮಂತ್ರಿಗಳ ಪರ ವಕೀಲರು ಇದೇ ವೇಳೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನಿತೀಶ್ ಕುಮಾರ್ 1991ರಲ್ಲಿ ಬಿಹಾರದ ಬರ್ಹ್ ಕ್ಷೇತ್ರದ ಲೋಕಸಭಾ ಉಪಚುನಾವಣೆ ಸಮಯದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕ ಸೀತಾರಾಂ ಸಿಂಗ್ ಅವರನ್ನು ಹತ್ಯೆ ಮಾಡಿದ್ದಾರೆ, ಅಲ್ಲದೆ ನಾಲ್ವರನ್ನು ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ ವಕೀಲರಾದ ಎಂ. ಎಲï. ಶರ್ಮಾ ಪಿಐಎಲ್ ಸಲ್ಲಿಸಿದ್ದರು.