ಯುಗಾದಿ ಹಬ್ಬವಾದ ನಿನ್ನೆ ಹೊಸ ಜೀವನಕ್ಕೆ ಕಾಲಿಟ್ಟಿದ್ದ ನವಜೋಡಿ ಆತ್ಮಹತ್ಯೆ

ಹುಣಸೂರು,ಮಾ.19-ಯುಗಾದಿ ಹಬ್ಬವಾದ ನಿನ್ನೆ ಹೊಸ ಜೀವನಕ್ಕೆ ಕಾಲಿಟ್ಟಿದ್ದ ನವಜೋಡಿ ಆತ್ಮಹತ್ಯೆಗೆ ಯತ್ನಿಸಿ ವಧು ಸಾವನ್ನಪ್ಪಿರುವ ಘಟನೆ ಹುಣಸೂರು ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಆರ್.ನಗರದ ಕುವೆಂಪು ಬಡಾವಣೆಂiÀ ನವವಧು ಜಮುನಾ(28) ಆತ್ಮಹತ್ಯೆಗೆ ಶರಣಾಗಿದ್ದು , ಹುಣಸೂರು ತಾಲ್ಲೂಕಿನ ತೊಂಡಾಳು ಗ್ರಾಮದವರಾದ ದಿಲೀಪ್ ಅವರ ಸ್ಥಿತಿ ಚಿಂತಾಜನಕವಾಗಿದೆ.

ಇವರಿಬ್ಬರು ಸಂಬಂಧಿಕರಾಗಿದ್ದರಿಂದ ಜುಮುನಾ ಹುಡುಗನ ಮನೆಗೆ ಹಬ್ಬಕ್ಕೆಂದು ಬಂದಿದ್ದಾಗ ಈ ದುರ್ಘಟನೆ ನಡೆದಿದೆ.

ಇವರಿಬ್ಬರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೆಯೂ ನಿನ್ನೆಯಷ್ಟೇ ಯುಗಾದಿ ಹಬ್ಬದಂದು ತೊಂಡಾಳು ಗ್ರಾಮದ ದೇವಾಲಯದಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿರಿಸಿದ್ದರು.

ಇವರ ಮದುವೆಗೆ ಎರಡೂ ಮನೆಯವರ ವಿರೋಧವಿತ್ತು. ಮದುವೆ ಮಾಡಿಕೊಂಡ ವಿಷಯ ತಿಳಿದ ಹುಡುಗನ ಮನೆಯವರು ಮನೆಗೆ ಬರದಂತೆ ಎಚ್ಚರಿಸಿದ್ದರು ಎನ್ನಲಾಗಿದ್ದು , ಇದರಿಂದ ಬೇಸತ್ತ ನವಜೋಡಿ ಗ್ರಾಮದ ಸಮೀಪದ ಗೌಡಗೆರೆ ಪೆಟ್ರೋಲ್ ಬಂಕ್ ಹಿಂಭಾಗ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದನ್ನು ಗಮನಿಸಿದ ದಾರಿಹೋಕರು ಕೂಡಲೇ ಈ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ವಧು ಜಮುನಾ ಸಾವನ್ನಪ್ಪಿದ್ದು , ವರ ದಿಲೀಪ್ ಸ್ಥಿತಿ ಗಂಭೀರವಾಗಿದೆ.

ಹುಣಸೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ