ಮಲ್ಲೇಶ್ವರಂನ ಚಂದ್ರಶೇಖರ್ ಆಜಾದ್ ಮೈದಾನದಲ್ಲಿ ವಾಲಿಬಾಲ್ ಒಳಾಂಗಣ ಕ್ರೀಡಾಂಗಣ

BEIJING - AUGUST 23: Marianne Steinbrecher #3 of Brazil tries to spike the ball past Kim Glass #10, Danielle Scott-Arruda #2 and Heather Bown #3 of the United States during the women's gold medal volleyball game held at the Beijing Institute of Technology Gymnasium on Day 15 of the Beijing 2008 Olympic Games on August 23, 2008 in Beijing, China. (Photo by Cameron Spencer/Getty Images)

ಬೆಂಗಳೂರು, ಮಾ.17- ಮಲ್ಲೇಶ್ವರಂನ ಚಂದ್ರಶೇಖರ್ ಆಜಾದ್ ಮೈದಾನದಲ್ಲಿ ವಾಲಿಬಾಲ್ ಕ್ರೀಡೆಗಾಗಿಯೇ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಸುಮಾರು 5.61 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ ಸೋಮವಾರ (ಮಾ.19)ಲೋಕಾರ್ಪಣೆಗೊಳ್ಳಲಿದೆ.

ಕ್ರೀಡೆಗೆ ಹೆಚ್ಚಿನ ಪೆÇ್ರೀ ನೀಡುವ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತ ಹಲವಾರು ಮೈದಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ಉದ್ಘಾಟನೆಗೊಳ್ಳುತ್ತಿರುವ ಈ ಒಳಾಂಗಣ ಕ್ರೀಡಾಂಗಣ ಹಲವು ವೈಶಿಷ್ಟ್ಯಗಳಿಂದ ಕೂಡಿದೆ ಎಂದು ಶಾಸಕ ಸಿ.ಎನ್.ಅಶ್ವತ್ಥನಾರಾಯಣ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.

ಮಾ.19ರಂದು ಸಂಜೆ 6 ಗಂಟೆಗೆ ಕೇಂದ್ರ ಸಾಂಖ್ಯಿಕ ಹಾಗೂ ಯೋಜನಾ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಅವರು ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ.
ಈ ಹಿಂದೆ ಸದರಿ ಸ್ಥಳದಲ್ಲಿ ಬಿಬಿಎಂಪಿ ಕಚೇರಿ ಹಾಗೂ ವಸತಿಗೃಹದ ಕಟ್ಟಡವಿತ್ತು. ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಅವರ ಮನವೊಲಿಸಿ, ಬಿಬಿಎಂಪಿ ಕಚೇರಿಯನ್ನು ಸೇವಾ ಕೇಂದ್ರಕಟ್ಟಡಕ್ಕೆ ಸ್ಥಳಾಂತರಿಸಿ. ಹಳೆಯ ಕಟ್ಟಡ ತೆರವುಗೊಳಿಸಿ ಅದೇ ಸ್ಥಳದಲ್ಲಿಇಂದು ಬೃಹತ್‍ಅಂತರಾಷ್ಟ್ರೀಯಗುಣಮಟ್ಟದ ವಾಲಿಬಾಲ್ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಿಲಾಗಿದೆ ಎಂದರು.

ಸಚಿವ ಡಿ.ವಿ.ಸದಾನಂದಗೌಡ ಅವರು ತಮ್ಮ ಅನುದಾನದಿಂದ 1.90 ಕೋಟಿ ರೂ., ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್‍ರವರು 50 ಲಕ್ಷ ರೂ., ನನ್ನ ಶಾಸಕರ ನಿಧಿಯಿಂದ 3.21 ಕೋಟಿ ರೂ.ಗಳನ್ನು ಬಳಸಿಕೊಂಡು ಕ್ರೀಡಾಂಗಣ ನಿರ್ಮಿಸಲಾಗಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಗುಣಮಟ್ಟದ ಒಂದು ವಾಲಿಬಾಲ್ ಕೋರ್ಟ್ , 2 ಟೀಂ ರೂಮ್‍ಗಳು, 2 ವಾರ್ಡ್ ರೂಮ್, 500 ಜನರು ಕೂರುವ ಸಾಮಥ್ಯದ ಸಾರ್ವಜನಿಕ ಗ್ಯಾಲರಿ ಹಾಗೂ ವಿಐಪಿ ಗ್ಯಾಲರಿ, ಆ್ಯಂಟಿ ಸ್ಕಿಡ್ ವಿನಾಯಿಲ್(6 ಎಂಎಂ) ನೆಲಹಾಸು ಹಾಕಲಾಗಿದೆ. ಕ್ರೀಡಾಂಗಣದ ಮುಂಭಾಗದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಿಲಾಗಿದ್ದು, ಇದರಲ್ಲಿ ಶಾಸಕರ ಕಾರ್ಯಾಲಯ ಕೂಡ ಬರಲಿದೆ.

ಇದಲ್ಲದೆ, ಡಿಜಿಟಲ್/ಸಿಮ್ಯುಲೇಷನ್ ಕಲಿಕಾ ಕೇಂದ್ರ ಅಭಿವೃದ್ಧಿಪಡಿಸಲಾಗುವುದು. ಡ್ರೆಸ್ ಚೇಂಜಿಗ್ ರೂಮ್ ಹಾಗೂ ಶೌಚಾಲಯ ವ್ಯವಸ್ಥೆಗಳನ್ನೊಳಗೊಂಡಿರುತ್ತದೆ. ರಾಜ್ಯದಲ್ಲಿ ಕೇವಲ ವಾಲಿಬಾಲ್ ಆಟಕ್ಕಾಗಿ ಮೀಸಲಾಗಿರುವ ಏಕೈಕ ಒಳಾಂಗಣ ಕ್ರೀಡಾಂಗಣ ಇದಾಗಿದೆ. ಇದರೊಂದಿಗೆ ವಾಲಿಬಾಲ್‍ಅಕಾಡೆಮಿ ಮಾಡುವ ಯೊಜನೆಯೂ ಇದೆ.

ಇದರ ಜತೆಗೆ ಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ ಸಿಂಥೆಟಿಕ್ ರನ್ನಿಂಗ್ ಟ್ರ್ಯಾಕ್, ಎರಡು ಕಬ್ಬಡಿ ಮೈದಾನ, ಒಂದು ಬಾಲ್ ಬ್ಯಾಡ್ಮಿಂಟನ್ ಹಾಗೂ ಒಂದು ಶಟಲ್ ಕಾಕ್/ ಹೊರಾಂಗಣ ವಾಲಿಬಾಲ್ ಆಟದ ಮೈದಾನ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, 2019ರೊಳಗೆ ಇಡೀ ಆಟದ ಮೈದಾನದ ಚಿತ್ರಣ ಸಂಪೂರ್ಣ ಬದಲಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ