ಅಮೆರಿಕ ಸೇನಾ ಹೆಲಿಕಾಪ್ಟರ್ ಪಶ್ಚಿಮ ಇರಾಕ್‍ನಲ್ಲಿ ಅಪಘಾತ ಏಳು ಯೋಧರು ಮೃತ

ಬಾಗ್ದಾದ್/ವಾಷಿಂಗ್ಟನ್, ಮಾ.17-ಅಮೆರಿಕ ಸೇನಾ ಹೆಲಿಕಾಪ್ಟರ್ ಪಶ್ಚಿಮ ಇರಾಕ್‍ನಲ್ಲಿ ಅಪಘಾತಕ್ಕೀಡಾಗಿ ಅದರಲ್ಲಿದ್ದ ಎಲ್ಲ ಏಳು ಯೋಧರು ಮೃತಪಟ್ಟಿದ್ದಾರೆ. ಅಮೆರಿಕ ರಕ್ಷಣಾ ಅಧಿಕಾರಿಯೊಬ್ಬರು ನಿನ್ನೆ ಈ ವಿಷಯ ಖಚಿತಪಡಿಸಿದ್ದಾರೆ.
ವೈರಿಗಳ ದಾಳಿಯಿಂದ ಹೆಲಿಕಾಪ್ಟರ್ ಪತನಗೊಂಡಿದೆ ಎಂಬುದನ್ನು ತಳ್ಳಿ ಹಾಕಿರುವ ಅವರು ಅಪಘಾತದ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.  ಅಮೆರಿಕದ ಸೇನಾ ನೆಲೆಯಾಗಿರುವ ಇರಾಕ್ ಕಾಯಿಮ್ ನಗರದ ಬಳಿ ಎಚ್‍ಎಚ್-60 ಪೇವ್ ಹಾಕ್ ಹೆಲಿಕಾಪ್ಟರ್ ಪತನಗೊಂಡಿದೆ. ಇದರಲ್ಲಿದ್ದ ಎಲ್ಲ ಏಳು ಯೋದರು ಮೃತಪಟ್ಟಿದ್ದಾರೆ ಎಂದು ಇರಾಕ್‍ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ನಡೆಯುತ್ತಿರುವ ಅಮೆರಿಕ ನೇತೃತ್ವದ ಸೇನಾ ಕಾರ್ಯಾಚರಣೆಗಳ ನಿರ್ದೇಶಕ ಬ್ರಿಗೇಡಿಯರ್ ಜನರಲ್ ಜೋನಾಥನ್ ಪಿ ಬ್ರಾಗಾ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ